Slider

ಯಾರ ಮುಡಿಗೇರಲಿದೆ ವಿಶ್ವಕಪ್ ಕಿರೀಟ:-ಇಂದು ಕಿವೀಸ್-ಆಸೀಸ್ ಫೈನಲ್ ಸೆಣೆಸಾಟ-ಸಂಭಾವ್ಯ ಪ್ಲೇಯಿಂಗ್ 11ಇಲ್ಲಿದೆ.


ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ಇಂದಿನ ಪಂದ್ಯ ದುಬೈ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಟಾಸ್ ಉಭಯ ತಂಡಗಳಿಗೆ ಪ್ರಮುಖವಾಗಲಿದೆ.

ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯು ಇದೀಗ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಚೊಚ್ಚಲ ಪ್ರಶಸ್ತಿಗಾಗಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಮತ್ತು ಆಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ.

ಸಂಭಾವ್ಯ ಪ್ಲೇಯಿಂಗ್ 11ಇಲ್ಲಿದೆ.
ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಡೇರಿಲ್ ಮಿಚೆಲ್ , ಕೇನ್ ವಿಲಿಯಮ್ಸನ್ (ನಾಯಕ) , ಟಿಮ್ ಸೀಫರ್ಟ್​ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಜೇಮ್ಸ್ ನೀಶಮ್ , ಮಿಚೆಲ್ ಸ್ಯಾಂಟ್ನರ್ , ಆಡಮ್ ಮಿಲ್ನ್ , ಟಿಮ್ ಸೌಥಿ , ಇಶ್ ಸೋಧಿ , ಟ್ರೆಂಟ್ ಬೌಲ್ಟ್

ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಆರೋನ್ ಫಿಂಚ್ (ನಾಯಕ) , ಮಿಚೆಲ್ ಮಾರ್ಷ್ , ಸ್ಟೀವನ್ ಸ್ಮಿತ್ , ಗ್ಲೆನ್ ಮ್ಯಾಕ್ಸ್ ವೆಲ್ , ಮಾರ್ಕಸ್ ಸ್ಟೊಯಿನಿಸ್ , ಮ್ಯಾಥ್ಯೂ ವೇಡ್ ( ವಿಕೆಟ್ ಕೀಪರ್ ) , ಪ್ಯಾಟ್ ಕಮಿನ್ಸ್ , ಮಿಚೆಲ್ ಸ್ಟಾರ್ಕ್ , ಆಡ್ಯಂ ಝಂಪಾ , ಜೋಶ್ ಹ್ಯಾಝಲ್​ವುಡ್

ಪಂದ್ಯ ಇಂದು ರಾತ್ರಿ7:30 ಕ್ಕೆ ನಡೆಯಲಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo