ಅರಬ್ಬೀ ಸಮುದ್ರದಿಂದ ಭಾರೀ ಗಾತ್ರದ ಹೆಲಿಕಾಪ್ಟರ್ ಫಿಶ್‍ನನ್ನು ಬಲೆಹಾಕಿ ಹಿಡಿಯಲಾಗಿದೆ. ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೆಲಿಕಾಪ್ಟರ್ ಮೀನಿನ ಗಾತ್ರ ಆಕಾರ ನೋಡಿದರೆ ಜನರು ಆಶ್ಚರ್ಯಗೊಳ್ಳುತ್ತಾರೆ.
ಉಡುಪಿಯ ಮಲ್ಪೆ ಬಂದರಿನಲ್ಲಿ ಭಾರೀ ಗಾತ್ರದ ಉದ್ದ ಬಾಲ, ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆಯಿರುವ ಬಲು ಅಪರೂಪದ ಮೀನು ಸಿಕ್ಕಿದೆ.
ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನಲ್ಲಿ ಬಲೆ ಬೀಸಲಾಗಿತ್ತು. ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರೀ ಗಾತ್ರದ ಈ ಮೀನು ಬಿದ್ದಿದ್ದು ಜನರ ಕಣ್ಣಲ್ಲಿ ಬೆರಗು ಮೂಡಿಸಿದೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ