Slider

ಶಬರಿಮಲೆ ಯಾತ್ರಾರ್ಥಿಗಳ ಪ್ರವೇಶದ ಮೇಲೆ ನಿಗಾ

ಕರೋನ ಸುಮಯವಾದರು ಕೂಡ ಈ ಬಾರಿಯಾದರು ಅಯ್ಯಪ್ಪ ಸ್ವಾಮಿ ಯನ್ನು ಕಣ್ತುಂಬಿಕೊಳ್ಳಬೇಕೆಂದು ಅದೆಷ್ಟೋ ಭಕ್ತರು ತರಾತುರಿಸುತಿದ್ದಾರೆ. ಆದರೆ  ಪ್ರತಿವರ್ಷದಂತೆ ಈ ಬಾರಿಯೂ ಕೂಡ ತೀರ್ಥಕ್ಷೇತ್ರ ಶಬರಿಮಲೆಯಲ್ಲಿ ನವೆಂಬರ್‌ 16 ರಿಂದ ಮಂಡಲ-ಮಕರವಿಳಕ್ಕು ಕಾರ್ಯಕ್ರಮ ನಡೆಯಲಿರುವುದು. 

ಈ ನಿಮಿತ್ತ ಕೇರಳ ಸರಕಾರವು ಶಬರಿಮಲೆ  ಯಾತ್ರರ್ಥಿಗಳಿಗೆ ಸಲಹೆ ನೀಡಿದ್ದು, ಭಕ್ತಾದಿಗಳ ದರ್ಶನಕ್ಕೆ ದೈನಂದಿನ ಮಿತಿ ನಿಗದಿಪಡಿಸಿದೆ ಎಂದು ಸ್ಪಷ್ಟಪಡಿಸಿದೆ. ಪ್ರಾರಂಭದ ದಿನಗಳಲ್ಲಿ ದೈನಂದಿನ 25 ಸಾವಿರ ಮಂದಿ ಭಕ್ತಾದಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿಕೆ ನೀಡಿದ್ದಾರೆ.

“ಒಂದು ವೇಳೆ ಭಕ್ತಾದಿಗಳ ಸಂಖ್ಯೆಯಲ್ಲಿ ಏನಾದರೂ ಏರಿಳಿತಗಳನ್ನು ಮಾಡಬೇಕಾದ ಅವಶ್ಯಕತೆ ಉಂಟಾದಲ್ಲಿ ಆ ಕುರಿತು ಚರ್ಚೆ ನಡೆಸಿದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು” ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹೇಳಿಕೆ ನೀಡಿದ್ದಾರೆ. ತೀರ್ಥಯಾತ್ರೆ ಪ್ರಾರಂಭಗೊಳ್ಳುವ ಮೊದಲು ಪರಿಸ್ಥಿತಿ ಅವಲೋಕನ ನಡೆಸಲು ನಡೆದ ಸಭೆಯಲ್ಲಿ ಈ ತೀರ್ಮಾನಗಳನ್ನು ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ದೇವಸ್ಯಂ ಮಂಡಳಿ, ಸಾರಿಗೆ ಇಲಾಖೆ,  ಅರಣ್ಯ ಇಲಾಖೆ, ಆರೋಗ್ಯ ಮತ್ತು ಜಲ ಸಂಪನ್ಮೂಲಗಳ ರಾಜ್ಯ ಮಂತ್ರಿಗಳು ಹಾಗೂ ರಾಜ್ಯ ಪೊಲೀಸ್‌ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo