ಉಡುಪಿ : ನಿವೃತ್ತ ಯೋಧನಿಗೆ ರಾಯಣ್ಣ ಪುರಸ್ಕಾರ ಪ್ರಶಸ್ತಿ ಪ್ರದಾನ
ಉಡುಪಿ ಜಿಲ್ಲೆಯ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸೇನೆಯಲ್ಲಿ ನಿವೃತ್ತ ಹೊಂದಿದ ವೀರ ಯೋಧನಿಗೆ ರಾಯಣ್ಣ ಪುರಸ್ಕಾರ ಸಮಾರಂಭ ಅಕ್ಟೋಬರ್ 6 ರ ಬುಧವಾರ ಮಧ್ಯಾಹ್ನ 2:30ಯ ಸುಮಾರಿಗೆ ಸಂಘಟನೆಯ ಕೇಂದ್ರ ಕಛೇರಿಯಾದ ಆದಿ ಉಡುಪಿಯ ರಿಗಲ್ ನೆಕ್ಸ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ಉಪಸ್ಥಿತರಿರಲಿದ್ದು ನಿವೃತ್ತ ಯೋಧ ಕೃಷ್ಣ ಶೆಟ್ಟಿ ಬೆಟ್ಟು ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದರ ಜೊತೆಗೆ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅಭಿನಂದನೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಭೆಯ ಸಭಾಧ್ಯಕ್ಷತೆಯನ್ನು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲಾಧ್ಯಕ್ಷರಾದ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಇವರು ವಹಿಸಲಿದ್ದಾರೆ.
ಇನ್ನು ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ನ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್, ಪತ್ರಕರ್ತ ಜನಾರ್ದನ ಕೊಡವೂರು, ಭಾಗ್ಯ ಶ್ರೀ ಬಾಬಣ್ಣ, ಮಂಜುನಾಥ ನೋಟಗಾರ್ ಮಂಜು ಚಿತ್ರದುರ್ಗ, ಗಣೇಶ್.ಸಿ. ಬೆಂಗಳೂರು ಹಾಗೂ ಗೌರಿ ಕೃಷ್ಣ ಶೆಟ್ಟಿ ಬೆಟ್ಟು ಭಾಗವಹಿಸಲಿದ್ದಾರೆ.
ಸಮಾರಂಭದ ನಂತರದ ಅಂಗವಾಗಿ ನಡೆಯಲಿರುವ ಅಭಿನಂದನೆ ಮೆರವಣಿಗೆಯು ಆದಿಉಡುಪಿ ಕರಾವಳಿ - ಬನ್ನಂಜೆ-ಸಿಟಿಬಸ್ ನಿಲ್ದಾಣ-ಕಲ್ಸಂಕ-ಕಡಿಯಾಳಿ- ಮಣಿಪಾಲ ಮಾರ್ಗವಾಗಿ ಪರ್ಕಳದವರೆಗೆ ಮೆರವಣಿಗೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರದಾನ ಕಾರ್ಯದರ್ಶಿ ಮಹೇಶ್ ಗುಂಡಿಬೈಲು ಇವರು ತಿಳಿಸಿದ್ದಾರೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ