ಕುಂದಾಪುರ ಹೊಸಜಿಲ್ಲೆಯನ್ನಾಗಿ ಮಾಡಲು ಆಗ್ರಹ: ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ
ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಅಪ್ಪಣ್ಣ ಹೆಗಡೆ ಅವರ ನೇತೃತ್ವದ ನಿಯೋಗದಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರನ್ನು ಭೇಟಿಯಾಗಿ ಕುಂದಾಪುರ ಜಿಲ್ಲೆಯನ್ನಾಗಿ ಮಾಡುವ ಕುರಿತು ಶಾಸಕರಿಗೆ ಮನವರಿಕೆ ಮಾಡಲಾಯಿತು,
ಮನವಿ ಸ್ವೀಕರಿಸಿದ ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಅವರು ನನ್ನ ಸಂಪೂರ್ಣ ಬೆಂಬಲ ಕುಂದಾಪುರ ಜಿಲ್ಲೆಯನ್ನಾಗಿ ಮಾಡುವ ಬಗ್ಗೆ ಸದಾ ಇರುತ್ತದೆ ಎಂದು ತಿಳಿಸಿದರು,
ಹಾಗೆಯೇ ಈ ವಿಷಯದ ಕುರಿತು ಮುಂದಿನ ದಿನದಲ್ಲಿ ಸಂಬಂಧಪಟ್ಟವರ ಗಮನಕ್ಕೂ ತರಲಾಗುವುದು ಎಂದರು.
ಇದೊಂದು ತುಂಬಾ ದೂರದೃಷ್ಟಿಯ ಚಿಂತನೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಪ್ರಮುಖರಾದ ಸಂಚಾಲಕ ಮುಂಬಾರ ದಿನಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಗಣಪತಿ ಶ್ರೀಯಾನ್, ಉಪಾಧ್ಯಕ್ಷರಾದ ದಸ್ತಗಿರಿ ಕಾವ್ರಾಡಿ, ಭುಜಂಗ ಶೆಟ್ಟಿ ಮುಳ್ಳು ಗುಡ್ಡಿ, ಗೋಪಾಲ್ ಶೆಟ್ಟಿ, ಕಿರಣ ಕ್ರಾಸ್ತ ಕನ್ನಡ ಕುದುರು, ಕೆಆರ್ ನಾಯಕ್ ಬೆಂಗಳೂರು, ಗೋವಿಂದರಾಯ ಸೇರಿಗಾರ್ ಗಂಗೊಳ್ಳಿ, ಅಶೋಕ್ ಕುಮಾರ್ ನಾಯ್ಕ್ ಅಂಪಾರು, ನಾರಾಯಣ್ ನಾಯಕ್ ನೇರಳಕಟ್ಟೆ, ಚಂದ್ರಶೇಖರ್ ಆಚಾರಿ ಬಸ್ರೂರು, ಪಾಜಲ್ ನೇರಳಕಟ್ಟೆ, ಓಂ ಗುರು ಬಸ್ರೂರು,ಸೀತಾರಾಮ ಶೆಟ್ಟಿ,
ಕೆಆರ್ ನಾಯಕ್, ವಿದ್ಯುತ್ ಗುತ್ತಿಗೆದಾರರ ಸಂಘ ಅಧ್ಯಕ್ಷ ಹಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ