ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ,ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗೆ ಅನುಕೂಲವಾಗುವಂತೆ ಜಿಲ್ಲೆಯ ವಿವಿಧ ಖಾಸಗಿ ಸಂಸ್ಥೆಗಳು, ಇತರ ದಾನಿಗಳು ಸಹಕಾರ ನೀಡುತ್ತಿದ್ದು ಆ ನಿಟ್ಟಿನಲ್ಲಿ ಎಂಟಿಆರ್ ಫುಡ್ ಸಂಸ್ಥೆಯು ಪ್ರಸ್ತುತ ಅವಶ್ಯವಿರುವ ಮತ್ತು ಕೋವಿಡ್ ೩ನೇ ಅಲೆಯ ಮುಂಜಾಗ್ರತೆಯ ದೃಷ್ಟಿಯಿಂದ ೫೦ ಲಕ್ಷ ರೂಗಳಲ್ಲಿ ನೆರವು ನೀಡಿರುವುದು ಜಿಲ್ಲಾಭಿವೃದ್ಧಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ ಎಂದರು.
ಎಂಟಿಆರ್ ಸಂಸ್ಥೆಯ ಜನರಲ್ ಬ್ಯುಸಿನೆಸ್ ಮ್ಯಾನೇಜರ್ ಮೂರ್ತಿ ಆವರು ಮಾತನಾಡಿ, ಎಂ.ಟಿ.ಆರ್ ಸಂಸ್ಥೆಯು ಸಾರ್ವಜನಿಕರ ಸೇವೆಯನ್ನು ಮಾಡುವುದು ಸಂಸ್ಥೆಯ ಮುಖ್ಯ ಗುರಿ ಹೊಂದಿದ್ದು, ಒಂದು ವರ್ಷದ ಗ್ಯಾರೆಂಟಿ ಮತ್ತು ವಾರೆಂಟಿ, ಉಚಿತ ಸರ್ವಿಸ್ ಇರುವ ಸುಸಜ್ಜಿತ ಆ್ಯಂಬುಲೆನ್ಸ್ ಹಾಗೂ ೧೦ ವೆಂಟಿಲೇಟರ್ ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ, ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಇದರ ಉಪಯೋಗ ಪಡೆದುಕೊಂಡಲ್ಲಿ ಸಂಸ್ಥೆಯ ಕೊಡುಗೆಗೆ ಮಹತ್ವ ಸಿಕ್ಕಂತಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲೆಯ ಡಿ.ಹೆಚ್.ಓ ಡಾ. ನಾಗಭೂಷಣ್ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್, ಎಂ.ಟಿ.ಆರ್ ಸಂಸ್ಥೆಯ ಮುಖ್ಯಾಧಿಕಾರಿ ಪ್ರಕಾಶ್ ದೇಬಶೆಟ್ಟಿ, ಸಂಸ್ಥೆಯ ಏರಿಯಾ ಸೇಲ್ಸ್ ಮ್ಯಾನೇಜರ್ ಆಶಿಶ್ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದು ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ