ಬೆಂಗಳೂರು: ಸೋಮವಾರ ತಡರಾತ್ರಿ
ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ನಡೆದ ತಮಿಳುನಾಡು ಎಂಎಲ್ಎ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಘಟನೆಯ ಮೊದಲು ಮೃತರು ಎಲ್ಲೆಲ್ಲಿ ಓಡಾಡಿದ್ದಾರೆ?
ಕರುಣ್ ಸಾಗರ್ ಬೆಂಗಳೂರಿಗೆ ಎಷ್ಟೊತ್ತಿಗೆ ಎಂಟ್ರಿ ಕೊಟ್ಟಿದ್ದಾನೆ? ಕರ್ನಾಟಕ ತಮಿಳುನಾಡು ಗಡಿ ಟೋಲ್ನಿಂದ ಕಾರು ಪಾಸಾಗಿದ್ದು ಎಷ್ಟೊತ್ತಿಗೆ? ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆಯ ಸಂಬಂಧ ಕೆಲ ಮಾಹಿತಿ ಕೋರಿ ಟೋಲ್ ಆಡಳಿತ ಮಂಡಳಿಗೂ ಸಹ ಪೊಲೀಸರು ನೋಟಿಸ್ ನೀಡಿದ್ದಾರೆ. ಕರುಣ್ ಸಾಗರ್ ಟೋಲ್ ದಾಟಿದ್ದು ಯಾವಾಗ? ಆ ವೇಳೆ ಕಾರಿನಲ್ಲಿ ಎಷ್ಟು ಜನ ಇದ್ರು ಎನ್ನುವುದಕ್ಕೆ ಸಿಸಿ ಕ್ಯಾಮರಾ ದೃಶ್ಯಗಳನ್ನು ನೀಡುವಂತೆ ನೋಟಿಸ್ ನೀಡಲಾಗಿದೆ.
ಇದರ ಜತೆಗೆ ಬಿಬಿಎಂಪಿ ಅಧಿಕಾರಿಗಳ ಜತೆ ಪೊಲೀಸರು ಜಂಟಿಯಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಕೋರಮಂಗಲಕ್ಕೆ ಬಂದ ಬಳಿಕ ಕಾರು ಎಲ್ಲೆಲ್ಲಿ ಓಡಾಡಿದೆ? ಎಲ್ಲಾದ್ರು ಕಾರು ನಿಲ್ಲಿಸಿ ಸಯಮ ಕಳೆದಿರಬಹುದಾ ಎಂದು ಪರಿಶೀಲನೆ ಮಾಡುತ್ತಿದ್ದಾರೆ. ಕಾರಿನ ಸಂಬಂಧ ಆರ್ಟಿಓ ಅಧಿಕಾರಿಗಳಿಗೆ ಮೇಮೊ ನೀಡಿ ಮಾಹಿತಿ ಕಲೆಹಾಕಲಾಗುತ್ತಿದೆ. ಕಾರಿನ ವೇಗ ಎಷ್ಟಿರಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಒಂದು ಸಿಗ್ನಲ್ ಇಂದ ಮತ್ತೊಂದು ಸಿಗ್ನಲ್ಗೆ ಎಷ್ಟು ಅಂತರ ಇದೆ. ಆ ಅಂತರವನ್ನು ಎಷ್ಟು ಸಮಯದಲ್ಲಿ ರೀಚ್ ಅಗಿದ್ದಾರೆ ಎಂದು ಪರಿಶೀಲನೆ ಮಾಡಿರುವ ಅಧಿಕಾರಿಗಳು ಸಿಸಿ ಕ್ಯಾಮರಾ ದೃಶ್ಯಗಳನ್ನ ಪಡೆದು ಕಾರಿನ ವೇಗವನ್ನು ಅಂದಾಜು ಮಾಡಲಾಗುತ್ತಿದೆ. ಏನಿಲ್ಲಾ ಅಂದ್ರು ಸುಮಾರು ಗಂಟೆಗೆ 120 ಕಿ.ಮಿ. ವೇಗದಲ್ಲಿ ಕಾರು ಚಲಿಸಿರುವ ಶಂಕೆ ವ್ಯಕ್ತವಾಗುತ್ತಿದೆ.
ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿರುವ ತನಿಖಾಧಿಕಾರಿಗಳು ಮೃತ ಕರುಣಾ ಸಾಗರ್ ತಂದೆ ಹಾಗೂ ತಮಿಳುನಾಡಿನ ಡಿಎಂಕೆ ಶಾಸಕ ವೈ ಪ್ರಕಾಶ್ ಅವರನ್ನು ಸಂಪರ್ಕ ಮಾಡಿದ್ದಾರೆ. ಮಗನ ಸಾವಿನ ಕುರಿತು ಹೇಳಿಕೆ ಪಡೆಯಲು ಸಂಪರ್ಕ ಮಾಡಿದ್ದು, ಕರುಣ್ ಸಾಗರ್ ಬೆಂಗಳೂರಿಗೆ ಬಂದಿದ್ದು ಯಾವಾಗ? ಎಷ್ಟು ಗಂಟೆಗೆ ಬೆಂಗಳೂರಿಗೆ, ಯಾಕೆ ಬಂದಿದ್ರು? ಬರುವ ಮೊದಲು ತಮಗೆ ಮಾಹಿತಿ ಇತ್ತಾ? ಪ್ರಕರಣ ಸಂಬಂಧ ತಮಗೆ ಏನಾದ್ರು ಮಾಹಿತಿ ಇದೆಯಾ? ಎಲ್ಲಾ ಹೇಳಿಕೆ ಪಡೆಯಲು ತನಿಖಾಧಿಕಾರಿ ಮುಂದೆ ಬರುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ಮಗನ ಸಾವಿನ ದುಃಖದಲ್ಲಿರುವ ಪ್ರಕಾಶ್ ಕಾಲವಕಾಶಕ್ಕೆ ಮನವಿ ಮಾಡಿದ್ದು, ಒಂದೆರಡು ದಿನ ಬಿಟ್ಟು ಬರುವುದಾಗಿ ಹೇಳಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಪ್ರಕರಣದ ಸಂಪೂರ್ಣ ವರದಿಯನ್ನು ಆಡುಗೋಡಿ ಟ್ರಾಫಿಕ್ ಪೊಲೀಸರು ಸಿದ್ಧತೆ ಮಾಡುತ್ತಿದ್ದಾರೆ. ಈಗಾಗಲೇ ಮೃತರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ರಕ್ತ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಮದ್ಯಪಾನ ಮತ್ತು ಮಾದಕ ವಸ್ತು ಸೇವನೆ ಧೃಡಪಡಿಸಲು ರಕ್ತ ಪರೀಕ್ಷೆ ಮಾಡಿಸಲಾಗಿದೆ. ರಕ್ತ ಪರೀಕ್ಷೆ ವರದಿ ಬಂದ ಬಳಿಕ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡರಿಗೆ ನೀಡಲಾಗುತ್ತದೆ. ಸಂಚಾರಿ ಪೂರ್ವ ವಿಭಾಗದ ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ವರದಿ ತಯಾರಾಗುತ್ತಿದೆ. ಮೃತರ ಮೂವರ ಮೊಬೈಲ್ಗಳು ಸಿಕ್ಕಿದ್ದು, ಅವುಗಳ ಡಾಟಾ ಅನಾಲಿಸಿಸ್ ಸಹ ನಡೆಯುತ್ತಿದೆ. ಬಹುತೇಕ ವರದಿ ರೆಡಿಯಾಗಿದೆ. ಆದರೆ, ರಕ್ತ ಪರೀಕ್ಷೆ ವರದಿ ಇನ್ನೂ ಬರಬೇಕಾಗಿರುವುದರಿಂದ ನಾಳೆ ವರದಿ ಸಲ್ಲಿಕೆ ಸಾಧ್ಯತೆ ಇದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ