Slider

ಸಂಚಾರಕ್ಕೆ ಮುಕ್ತಗೊಂಡ ಹಂಗಾರಕಟ್ಟೆ ಬಾರ್ಜು

ಹಂಗಾರಕಟ್ಟೆ: ಹಂಗಾರಕಟ್ಟೆ ಮತ್ತು ಕೋಡಿಬೇಂಗ್ರೆಯ ನಡುವೆ ಸಂಪರ್ಕ ಸೇತುವೆಯಂತಿದ್ದ ಹಂಗಾರಕಟ್ಟೆ ಬಾರ್ಜಿನ ಫೈಬರೀಕರಣ ಕಾಮಗಾರಿ ಸಂಪೂರ್ಣಗೊಂಡಿದ್ದು , ಇದೀಗ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿದೆ. 

ಕಳೆದ ಕೆಲವು ದಿನಗಳಿಂದ ಈ ಬಾರ್ಜಿನ ಫೈಬರೀಕರಣ ಕಾಮಗಾರಿ ಚಾಲ್ತಿಯಲ್ಲಿತ್ತು, ಇದೀಗ ಬಾರ್ಜಿನ ಫೈಬರೀಕರಣ ಪೂರ್ಣಗೊಂಡಿದೆ. ಈ ಹಿಂದೆ ಈ ಬಗ್ಗೆ ಉಡುಪಿ ಫಸ್ಟ್ ಕೂಡಾ ಬಾರ್ಜಿನ ಫೈಬರೀಕರಣ ಕಾರ್ಯದ ಬಗ್ಗೆ ಸಮಗ್ರ ವರದಿಯನ್ನು ಪ್ರಕಟಿಸಿತ್ತು, 


ಇನ್ನು ಮುಂದೆ ಬಾರ್ಜು ಎಂದಿನಂತೆ ಪ್ರಯಾಣಿಕರನ್ನು ಹಂಗಾರಕಟ್ಟೆ ಇಂದ ಕೋಡಿಬೆಂಗ್ರೆಗೆ ಸುರಕ್ಷಿತವಾಗಿ ಕರೆದೊಯ್ಯಲ್ಲಿದೆ. ಬಾರ್ಜಿನ ಪೂರ್ಣ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದರಿಂದ ಸ್ಥಳೀಯರೂ ಕೂಡಾ ಸಂತಸಗೊಂಡಿದ್ದಾರೆ. ಇಷ್ಟು ದಿನ ದುಪ್ಪಟ್ಟು ಹಣವನ್ನು ವ್ಯಯಿಸಿ ಮಲ್ಪೆ , ಹೂಡೆ, ಕೆಮ್ಮಣ್ಣು, ಕೋಡಿ ಬೆಂಗ್ರೆಗೆ ಪ್ರತಿನಿತ್ಯ ಮೀನು ಮಾರುವ ಮಹಿಳೆಯರಿಗೆ, ಕಟ್ಟಡ ಕಾರ್ಮಿಕರು ಶಾಲೆಯ ವಿದ್ಯಾರ್ಥಿಗಳು ತೆರಳಬೇಕಾಗಿತ್ತು, ಈಗ ಬಾರ್ಜಿನ ಕಾಮಗಾರಿ ಪೂರ್ಣಗೊಂಡಿದ್ದು ರಿಂದ ಸುಲಭವಾಗಿ ಬಾರ್ಜಿನ ಮೂಲಕ ತಲುಪಬಹುದಾಗಿದೆ.


ಇಂದು ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಕೋವಿಡ್19 ನಿಯಮಗಳ ಪಾಲನೆ ಯೊಂದಿಗೆ ಹಂಗಾರಕಟ್ಟೆಯಲ್ಲಿ ಗಣೇಶನ ವಿಗ್ರಹವನ್ನು ಇ ಬಾರ್ಜಿನ ಮೂಲಕವೇ ವಿಸರ್ಜಿಸಲಾಯಿತು.

ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo