ಉಡುಪಿ:- ಬಾವಿಗೆ ಬಿದ್ದ ಚಿರತೆಯ ರಕ್ಷಣೆ
ಉಡುಪಿ : ಆಹಾರ ಹುಡುಕಿ ಬಂದು ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಮಾಳ ಹುಕ್ರಟ್ಟೆ ಎಂಬಲ್ಲಿ ನಡೆದಿದೆ.
ಆಹಾರ ಹುಡುಕಿಕೊಂಡು ಕಾಡು ಪ್ರಾಣಿಯನ್ನು ಅಡ್ಡಾಡಿಸಿ ಬಂದ ಚಿರತೆ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ.
ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆಯಾಗಿದೆ. ಘಟನಾ ಸ್ಥಳವು ಕಾರ್ಕಳ ತಾಲೂಕು ವ್ಯಾಪ್ತಿಗೆ ಒಳಪಡಿದಾದರೂ ಮೂಡಬಿದ್ರಿ ಅರಣ್ಯ ಇಲಾಖೆ ವಿಭಾಗಕ್ಕೆ ಒಳಪಟ್ಟಿದಾಗಿದೆ.
ಸೆರೆ ಹಿಡಿದ ಚಿರತೆಯನ್ನು ಬೋನಿನಲ್ಲಿ ಕೂಡಿ ಹಾಕಿ ಮೂಡಬಿದ್ರಿ ಅರಣ್ಯ ಇಲಾಖಾ ಕಚೇರಿಗೆ ಕೊಂಡು ಹೋಗಲಾಗಿದೆ. ಅದನ್ನು ಪಿಳಿಪುಳ ನಿಸರ್ಗಧಾಮಕ್ಕೆ ಕಳುಹಿಸಲು ಚಿಂತನೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ