Slider

ಉಡುಪಿ:- ವಾರಾಂತ್ಯ ಕರ್ಫ್ಯೂ ವಿರೋಧಿಸಿ ವರ್ತಕರ ಸಂಘದ ಸಭೆ

ಉಡುಪಿ, ಸೆ.5: ಜಿಲ್ಲೆಯಾದ್ಯಂತ ಜಾರಿಯಾಗಿರುವ ವಾರಾತ್ಯಂತ ಕರ್ಫ್ಯೂ ವಿರೋಧಿಸಿ ರವಿವಾರ ಉಡುಪಿ ಕಿದಿಯೂರು ಹೊಟೇಲಿನಲ್ಲಿ ನಡೆದ ಉಡುಪಿ ಜಿಲ್ಲಾ ವರ್ತಕರ ಸಂಘ ಹಾಗೂ ಇತರೆ ಸಂಘಗಳ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈ ಗೊಳ್ಳಲಾಯಿತು.
ವಾರಂತ್ಯ ಕರ್ಪ್ಯೂ ಅವೈಜ್ಞಾನಿಕ ಹಾಗೂ ಹಾಸ್ಯಸ್ಪದವೂ ಆಗಿದೆ.ಬಹುತೇಕ ಅಂಗಡಿಗಳಿಗೆ ವ್ಯಪಾರ ಮಾಡಲೂ ಅನು ಮಾಡಿಕೊಟ್ಟು, ಉಳಿದ ಫ್ಯಾನ್ಸಿ, ಬಟ್ಟೆ, ಸೆಲೂನ್, ಎಲೆಟ್ರಿಕ್, ಚಿನ್ನಾಭರಣ, ಟೈಲರ್ಸ್‌ ಅಂಗಡಿಗಳನ್ನು ಬಂದ್ ಮಾಡಿಸಿರುವುದು ಸರಿಯಲ್ಲ. ಆದುದರಿಂದ ಸರಕಾರ ಜಿಲ್ಲೆಯಲ್ಲಿ ಜಾರಿಗೆ ತಂದಿ ರುವ ವಾರಾಂತ್ಯ ಕರ್ಫ್ಯೂನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಹನ ಶೀಲ ಪೈ ಎಚ್ಚರಿಕೆ ನೀಡಿದರು.


ಸಭೆಯಲ್ಲಿ ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ, ಜಿಲ್ಲಾ ಟೈಲರ್ ಅಸೋಶಿಯೇಶನ್ ಮಾಜಿ ಅಧ್ಯಕ್ಷ ವಿಠ್ಠಲ್ ಶೆಟ್ಟಿ, ರಾಜಸ್ತಾನ್ ವ್ಯಾಪಾರಿಗಳಾದ ಛಗನ್ ಸಿಂಗ್, ರಾಜೇಶ್, ವರ್ತಕ ಸಂಘದ ಉಪಾಧ್ಯಕ್ಷ ವಸಂತ ಭಟ್, ಕಾರ್ಯದರ್ಶಿ ನಾಗರಾಜ್, ವಿಶ್ವನಾಥ್ ಗಂಗೊಳ್ಳಿ, ಶ್ರೀಧರ್ ನಾಯಕ್, ವಿಶ್ವನಾಥ್ ಬಾಳಿಗಾ ಉಪಸ್ಥರಿದ್ದರು

ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo