ಉಡುಪಿ: ರೈಲು ಹಳಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
ಉಡುಪಿ: ಜಿಲ್ಲೆಯ ಇಂದ್ರಾಳಿ ರೈಲ್ವೆ ಮೇಲೆ ಅಪರಿಚಿತ ಶವ ಪತ್ತೆಯಾಗಿದೆ. ಈ ಪ್ರಕರಣದ ಕುರಿತು ಚಲಿಸುತ್ತಿರುವ ರೈಲು ವ್ಯಕ್ತಿಗೆ ಡಿಕ್ಕಿ ಹೊಡೆದು ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ.
ಸಧ್ಯ ಈ ಪ್ರಕರಣವನ್ನು ಮಣಿಪಾಲ ಪೋಲಿಸರು ದಾಖಲಿಸಿಕೊಂಡಿದ್ದು ಈ ಕುರಿತು ತನಿಖೆ ನಡೆಯುತ್ತಿದೆ. ಘಟನೆ ಸ್ಥಳದಿಂದ ಶವವನ್ನು ಮಣಿಪಾಲ ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕರಿಸಿದ್ದು ಮಾನವಿಯತೆ ಮೆರೆದಿದ್ದಾರೆ.
ಇನ್ನು ಮೃತನ ಕುರಿತು ಯಾವುದೆ ಪೂರ್ವಾಪರ ವಿವರಗಳು ಲಭ್ಯವಾಗಿಲ್ಲ. ಮೃತರಿಗೆ ಅಂದಾಜು 50 ವರ್ಷಗಳಾಗಿರಬೇಕು ಎಂದು ಅಂದಾಜಿಸಲಾಗಿದೆ. ಈ ಮೃತಶರೀರಕ್ಕೆ ತಕ್ಕ ವರಾಸುದಾರರು ಕಂಡುಬಂದಲ್ಲಿ ತುರ್ತಾಗಿ ಮಣಿಪಾಲ ಆರಕ್ಷಕ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲಾಗಿ ಸೂಚಿಸಲಾಗಿದೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ