ಹಂಗಾರಕಟ್ಟೆ ಯಿಂದ ಕೋಡಿಬೆಂಗ್ರೆಗೆ ಪ್ರಯಾಣಿಕರನ್ನು ಹೊತ್ತುಯುತಿದ್ದ ಬಾರ್ಜಿನ ಕೆಳ ಭಾಗದಲ್ಲಿ ಒಟ್ಟೃಯಾಗಿ ನೀರು ಒಳಬರುತ್ತಿರುವುದು ಕಂಡುಬಂದಿದೆ.
ಈ ಹಿಂದೆ ಮೊದಲನೆ ಬಾರಿ ಬಾರ್ಜು ತೀರಾ ತುಕ್ಕು ಹಿಡಿದ ಸ್ಥಿತಿಯಲ್ಲಿ ಕಂಡುಬಂದಿದ್ದು ಜನರು ಕೋಡಿ ಬೆಂಗ್ರೆಯಿಂದ ಹಂಗಾರಕಟ್ಟೆಗೆ ಮತ್ತು ಹಂಗಾರಕಟ್ಟೆ ಯಿಂದ ಕೋಡಿಬೆಂಗ್ರೆಗೆ ಪ್ರಯಾಣಿಸಲು ಹೆದರುತ್ತಿದ್ದರು. ಎರಡು ತಿಂಗಳ ಹಿಂದೆ ಬಾರ್ಜನ್ನು ದಡದ ಮೇಲಕ್ಕೆ ಎಳೆದು ದುರಸ್ತಿ ಸರಿಪಡಿಸಿದರು ಸಾರ್ವಜನಿಕರಿಗೆ ಉಪಯೋಗವಾಗದ ಹಿನ್ನೆಲೆಯಲ್ಲಿ ಜನರು ತೀರಾ ಆಕ್ರೋಶ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಪುನಃ ಒಂದು ವಾರದ ಹಿಂದೆ ಬಾರ್ಜು ಹಾಳುಗೊಡಿದ್ದು ಅದನ್ನು ಅಳಿವೆಯ ಇನ್ನೊಂದು ಕಡೆ ಎಳೆದು ಹಾಕಲಾಗಿದೆ. ಹೊಳೆಯ ನೀರು ಬಾರ್ಜಿನ ಒಳಗಡೆ ಬರದಂತೆ ಬಾರ್ಜಿನ ಕೆಳಭಾಗ ಫೈಬರಿಕಣ ಮಾಡಿ ಪುನಃ ಸೇವೆ ಚಾಲು ಮಾಡಲಾಗುವುದು ಎಂದು ಬಾರ್ಜಿನ ಚಾಲಕ ದಿನೇಶ್ ತಿಳಿಸಿದ್ದಾರೆ.
ವರದಿ:-UDUPI FIRST
For advertisement contact:-
Call:-+91 86605 39735
8548870937
or
Email us @:- Udupifirst@gmail.com
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ