ಕುಂದಾಪುರ: ಸೌಪರ್ಣಿಕಾ ನದಿಯಲ್ಲಿ ಈಜಲು ಇಳಿದ ಯುವಕ ನೀರುಪಾಲಾದ ಘಟನೆ ಆದಿತ್ಯವಾರ ತಾಲೂಕಿನ ಮವಾಡಿ ಎಂಬಲ್ಲಿ ನಡೆದಿದೆ.
ನೀರುಪಾಲಾದ ಯುವಕನನ್ನು ಗುಜ್ಜಾಡಿ ಗ್ರಾಮದ ಕೊಡಪಾಡಿ ಹೋಲಿಕ್ರಾಸ್ ಸಮೀಪದ ನಿವಾಸಿ ಮಹೇಂದ್ರ (24) ಎಂದು ಗುರುತಿಸಲಾಗಿದೆ.
ಸೆ.19ರ ರವಿವಾರದಂದು ಮಹೇಂದ್ರ, ಗುಜ್ಜಾಡಿ ಗ್ರಾಮದ ಕೊಡಪಾಡಿ ನಿವಾಸಿ ಆಶಿಕ್ (20) ಹಾಗೂ ತ್ರಾಸಿ ಆನಗೋಡು ನಿವಾಸಿ ಶರತ್ (25) ಎಂಬವರು ತ್ರಾಸಿಯ ಮೊವಾಡಿ ಸೇತುವೆ ಕೆಳಗಡೆ ಕುಳಿತಿದ್ದರು. ಈ ವೇಳೆ ಮಹೆಂದ್ರ ಹಾಗೂ ಆಶಿಕ್ ಈಜಲು ಇಳಿಯುತ್ತಿದ್ದಂತೆಯೇ ಮಹೇಂದ್ರ ನೀರಿನ ಸೆಳೆತಕ್ಕೆ ಸಿಲುಕಿದ್ದು ನೀರು ಪಾಲಾಗಿದ್ದಾರೆ. ಈ ವೇಳೆ ಆಶಿಕ್ ಕೂಡಾ ಅಪಾಯಕ್ಕೆ ಸಿಲುಕಿದ್ದು, ಸ್ಥಳೀಯರು ರಕ್ಷಿಸಿದ್ದಾರೆ.
ಈ ವೇಳೆಯಲ್ಲಿ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದು, ಭಾನುವಾರ ರಾತ್ರಿ ಕಳೆದರು ಯುವಕರ ಸುಳಿವು ಪತ್ತೆಯಾಗಿಲ್ಲ. ಈ ಸಂದರ್ಭದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ ಹಾಗೂ ಮತ್ತಿತರರು ಸ್ಥಳದಲ್ಲಿದ್ದು ಶೋಧ ಕಾರ್ಯಕ್ಕೆ ನೆರವನ್ನು ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ