ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಡಾ. ನಾಗಭೂಷಣ ಜ್ವರ ತಪಾಸಣೆಗೆ ಯಾರೂ ಹಿಂಜರಿಯಬಾರದು ಉಡುಪಿಗೆ ಕೇರಳ ಗಡಿ ಇಲ್ಲವಾದರೂ ಉಡುಪಿಯಲ್ಲಿ ಎಚ್ಚರ ಅಗತ್ಯವಾಗಿದೆ.ನೆರೆಯ ರಾಜ್ಯ ಕೇರಳದಲ್ಲಿ ನಿಫಾ ಪ್ರಕರಣ ಪತ್ತೆಯಾಗಿದೆ. ಈ ಸಮಯದಲ್ಲಿ ನಾವು ಕಟ್ಟೆಚ್ಚರ ವಹಿಸಿದ್ದೇವೆ ಎಂದರು
ಕೇರಳದಿಂದ ಎರಡು ತಿಂಗಳ ರಾಜ್ಯ ಪ್ರವೇಶಕ್ಕೆ ನಿರ್ಬಂಧವಿದೆ.ಜಿಲ್ಲೆಯಿಂದಲೂ ಕೇರಳಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಸಂಶಯಾಸ್ಪದ ಜ್ವರ ಪ್ರಕರಣಗಳು ಪತ್ತೆ ಹಚ್ಚುತ್ತೇವೆ .ಜ್ವರ ತಪಾಸಣೆಗೆ ಯಾರೂ ಹಿಂಜರಿಕೆ ಮಾಡಬೇಡಿ ನಿಫಾ ವೈರಸ್ ಇದೆ ಎಂದು ಭಯಪಡುವ ಅಗತ್ಯವಿದೆ. ಶೀಘ್ರ ಜ್ವರ ಪತ್ತೆ ಹಚ್ಚುವ ಎಲ್ಲಾ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಕೇವಲ ಎಚ್ಚರವಿದ್ದರೆ ಸಾಲುವುದಿಲ್ಲ, ಕಟ್ಟೆಚ್ಚರವಿರಬೇಕು. ಜನರ ಸ್ವಯಂಪ್ರೇರಿತ ನಿರ್ಬಂಧದಿಂದ ಯಾವ ಸಾಂಕ್ರಾಮಿಕ ತಡೆಯಬಹುದು ಎಂದು ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ