Slider

ಬ್ರಹ್ಮಶ್ರೀ ನಾರಾಯಣಗುರು ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಅಸಭ್ಯ ಪೋಸ್ಟ್‌ ಮಾಡಿದ್ದ ವ್ಯಕ್ತಿಯ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹರೀಶ್‌ ಕುಂಭಾಶಿ ಎನ್ನುವವರು ತಮ್ಮ ಫೇಸ್‌ ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ನಾರಾಯಣ ಗುರುಗಳ ಫೋಟೋ ಹಾಕಿ, "ಗುರುಗಳೇ ಕೆಲವು ಸೂ..
ಮಕ್ಕಳಿಗೆ ಜಾತೀಯತೆ ಧರ್ಮ ನೀವೇ ಹೇಳಬೇಕು. ನಾರಾಯಣ ಗುರು ಜಯಂತಿಯ ಶುಭಾಶಯಗಳು" ಎಂದು ಉಲ್ಲೇಖಿಸಿದ್ದರು.
ಈ ಬಗ್ಗೆ ದೂರು ದಾಖಲಿಸಿರುವ ಕಿರಣ್‌ ಪೂಜಾರಿ ಎನ್ನುವವರು, "ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಿದ್ದಾಂತವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗೆಗೆ ಇತ್ತೀಚೆಗೆ ಹರೀಶ್‌ ಕುಂಭಾಶಿ ಎನ್ನುವ ವ್ಯಕ್ತಿಫೇಸ್‌ ಬುಕ್‌ನಲ್ಲಿ ಅಸಭ್ಯ ಪೋಸ್ಟ್‌ ಮಾಡುವ ಮೂಲಕ ನಾರಾಯಣ ಗುರುಗಳ ಅನುಯಾಯಿಗಳಿಗೆ ನೋವನ್ನುಂಟು ಮಾಡಿದೆ. ಇಂತಹ ವ್ಯಕ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಾಗೂ ಆ ವ್ಯಕ್ತಿ ನಾರಾಯಣ ಗುರುಗಳ ಪ್ರತಿಮೆಯ ಮುಂದೆ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೋಲೀಸರು ಬಲೆಬೀಸಿದ್ದಾರೆ.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo