ಹಂಗಾರಕಟ್ಟೆ: ಸ್ವಚ್ಚ ಬಾಳ್ಕುದ್ರು ಎನ್ನುವ ಯೋಜನೆ ಅಡಿಯಲ್ಲಿ ಹಮ್ಮಿಕೊಳ್ಳಲಾದ ಈ ಸ್ವಚ್ಚತ ಕಾರ್ಯಕ್ರಮ ಆರಂಭವಾಗಿ ಎರಡು ವರ್ಷ ಕಳೆದಿರುತ್ತದೆ. ಅಂತೆಯೆ ರವಿವಾರ ಬೆಳಿಗ್ಗೆ ಮುಂಚೆ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಜರಿದ್ದು ಜೊತೆಗೆ ಮನೆಯಿಂದ ಬರುವಾಗ ಸ್ವಯಂ ಪ್ರೇರಿತರಾಗಿ ಕತ್ತಿ, ಹಾರೆ, ಬುಟ್ಟಿ, ಇತ್ಯಾದಿ ಉಪಕರಣವನ್ನು ತಂದಿದ್ದು ಬೆಳಿಗ್ಗೆ 7:30 ಗೆ ಈ ಸ್ವಚ್ಚತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀನಿವಾಸ ರಸ್ತೆಯ ಎಡ ಮಾತು ಬೇರೆ ಬದಿಯಲ್ಲಿ ಬೃಹತ್ ಗಾತ್ರದ ಹುಲ್ಲುಗಳು ಬೆಳೆದಿದ್ದು ಆಚೆ ಈಚೆ ಸಂಚರಿಸುವ ಜನ ಸಾಮಾನ್ಯರಿಗೆ ಮತ್ತು ವಾಹನ ಸವಾರರಿಗೆ ಸಂಚರಿಸುವುದು ತೊಂದರೆಯಾಗುತಿತ್ತು. ಈ ಸಂದರ್ಭದಲ್ಲಿ ರಸ್ತೆಯನ್ನು ಹುಲ್ಲುಗಳಿಂದ ತೆರವುಗೊಳಿಸಲಾಯಿತು. ರಸ್ತೆಯ ಪಕ್ಕದಲ್ಲಿರುವ ಮೋರಿಗಳ ಸ್ವಚ್ಚತೆಯನ್ನು ಸಹ ಮಾಡಲಾಯಿತು. ಈ ಸಂದರ್ಭದಲ್ಲಿ ಈ ಕಾರ್ಯದ ಕುರಿತು ಗ್ರಾಮದ ಕೆಲವು ಸಾರ್ವಜನಿಕ ಬಂಧುಗಳು ಸರ್ವೋದಯ ಯುವಕ ಮಂಡಲದ ಯುವಕರಿಗೆ ಪ್ರಶಂಸನೀಯ ಮಾತುಗಳನ್ನು ಹೇಳುವುದರ ಜೊತೆಗೆ ಯುವಕರನ್ನು ಹುರಿದುಂಬಿಸುವ ಕಾರ್ಯ ನಡೆಸಿದರು.
ಸ್ವಚ್ಚತಾ ಕಾರ್ಯಾಗಾರಕ್ಕೆ ಸಂಘದ ವತಿಯಿಂದಲೆ ಬೆಳಗ್ಗಿನ ಉಪಹಾರ, ನಡುವೆ ಆಯಾಸಗೊಂಡವರಿಗೆ ತಂಪು ಪಾನೀಯ, ಮಧ್ಯಾಹ್ನದ ಭೋಜನ, ಸಂಜೆಯ ಚಹಾದ ವ್ಯವಸ್ಥೆಯನ್ನು ಮಾಡಲಾಯಿತು. ನಂತರ ಸುಮಾರು 5:00 ಯ ನಂತರ ಸ್ವಚ್ಚತಾ ಕಾರ್ಯಕ್ಕೆ ಪೂರ್ಣವಿರಾಮವನ್ನಿಟ್ಟು ಪುನಃ ಸಂಘಕ್ಕೆ ತೆರಳಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವಸದಸ್ಯರು ಸಭೆ ನಡೆಸಿ ಸಂಘದ ಸಮವಸ್ತ್ರವನ್ನು ವಿತರಿಸಿ ಮುಂದಿನ ವಾರದ ಸ್ವಚ್ಚತಾ ಕಾರ್ಯದ ಕುರಿತು ಚರ್ಚಿಸಲಾಯಿತು.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ