ಮಂಗಳೂರು ವಿಮಾನ ನಿಲ್ದಾಣ ಹೆಸರು ಬದಲಾಯಿಸದಿರಲು ತೀರ್ಮಾನ
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣ ಕೊನೆಗೂ ತನ್ನ ಹಳೆಯ ಹೆಸರನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಮಂಗಳೂರು ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ಅದಾನಿ ಸಂಸ್ಥೆಗೆ ವಹಿಸಿದ ಬಳಿಕ ಸಂಸ್ಥೆಯು “ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ನಾಮಕರಣಗೊಳಿಸಿತ್ತು.ಇದಕ್ಕೆ ವಿರೋಧ ತೀವ್ರ ವ್ಯಕ್ತವಾಗಿತ್ತು.
ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್ ಆಳ್ವ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಪಡೆದು ಕಾನೂನು ಹೋರಾಟ ರೂಪಿಸಿದ್ದರು. ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಪ್ರಶ್ನಿಸಿದಾಗ ಪ್ರಾಧಿಕಾರವು “ಒಪ್ಪಂದದ ಪ್ರಕಾರ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸುವಂತಿಲ್ಲ’ ಎಂದು ತಿಳಿಸಿತ್ತು. ಆ ಬಳಿಕ ಪ್ರಾಧಿಕಾರವು ಅದಾನಿ ಸಂಸ್ಥೆಗೆ ನೋಟಿಸ್ ನೀಡಿತ್ತು. ಇದೀಗ ಸೆ. 10ರಂದು ಅದಾನಿ ಸಂಸ್ಥೆಯು ನಿಲ್ದಾಣ ಹೆಸರನ್ನು ಮತ್ತೆ ಈ ಹಿಂದಿನಂತೆಯೇ ಬದಲಾಯಿಸಿದೆ ಎಂದು ದಿಲ್‌ರಾಜ್ ಆಳ್ವ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ