ಹೊನ್ನಾವರ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೆಸರಾಂತ ಯಕ್ಷಗಾನ ಕಲಾವಿದ ಕೃಷ್ಣ ಭಂಡಾರಿ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಒಂದು ವರ್ಷದ ಹಿಂದೆ ಅಪಘಾತಕ್ಕೀಡಾದ ನಂತರ ತೀವ್ರ ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿಯೇ ಇದ್ದರು. ಇಡಗುಂಜಿ ಮೇಳದಲ್ಲಿ ಭಾಗವತಿ ಮಾಡುತ್ತಿದ್ದ ಕೃಷ್ಣ ಭಂಡಾರಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೊನ್ನಾವರದ ಗುಣವಂತೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೃಷ್ಣ ಭಂಡಾರಿ ತಾನು ಹದಿನೈದರ ಹರೆಯದಲ್ಲೆ ರಂಗ ಪ್ರವೇಶಿಸಿದರು. ಇಡಗುಂಜಿ,ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಹಾಲಾಡಿ ಮೇಳಗಳಲ್ಲಿ ಯಕ್ಷಗಾನ ಕಲಾಸೇವೆಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.
ಕಡಲತಡಿಯ ಭಾರ್ಗವನೆಂದೆ ಖ್ಯಾತಿ ಪಡೆದ ಶಿವರಾಮ ಕಾರಂತ ಅವರ ಗರಡಿಯಲ್ಲಿ ಪಳಗಿ ಯಕ್ಷಗಾನ ಲೋಕದಲ್ಲೆ ಚಾಪನ್ನು ಮೂಡಿಸಿದ ಅವರು ಯಕ್ಷಗಾನ ಬಯಲಾಟ ಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡಿದ್ದಾರೆ.
ಯಕ್ಷಗಾನದ ಎಲ್ಲಾ ಅಂಗಗಳನ್ನು ಬಲ್ಲ ಪರಿಪೂರ್ಣ ಕಲಾವಿದರಾಗಿದ್ದ ಅವರು ಯಕ್ಷಗಾನ ಗುರುಗಳಾಗಿ ಅನೇಕ ಕಡೆ ತರಗತಿಗಳನ್ನು ನಡೆಸುತ್ತಿದ್ದರು. ಯಕ್ಷಗಾನವನ್ನು ಹವ್ಯಾಸವಾಗಿ ತೆಗೆದುಕೊಂಡಿದ್ದ ಹವ್ಯಾಸಿ ಸಂಘದ ಸದಸ್ಯರಿಗೆ ತರಬೇತಿ ನೀಡಿ ಪ್ರದರ್ಶನ ಏರ್ಪಡಿಸುತ್ತಿದ್ದರು ಇದೀಗ ಅವರು ತಮ್ಮ ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದು ಕುಟುಂಬದಲ್ಲಿ ಪ್ರಶಾಂತ್ ಮೌನ ಆವರಿಸಿದೆ.
ಅವರ ನಿಧನಕ್ಕೆ ಉಡುಪಿ ಜಿಲ್ಲೆಯ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ