Slider


ಬೈಂದೂರು:-ದೋಣಿ ದುರಂತ ಪ್ರಕರಣ ನಾಪತ್ತೆಯಾಗಿದ್ದ ಇಬ್ಬರ ಶವ ಪತ್ತೆ ಶೋಧ ಕಾರ್ಯ ಅಂತ್ಯ


ಬೈಂದೂರು:- ನಿನ್ನೆ ನಡೆದಿದ್ದ ದೋಣಿ ದುರಂತದಲ್ಲಿ ನಾಪತ್ತೆ ಯಾಗಿದ್ದ ಇಬ್ಬರು ಮೀನುಗಾರರ ಶವ ಇಂದು ಪತ್ತೆಯಾಗಿದೆ‌ . ನಿನ್ನೆ ೧೭ ಜನರ ತಂಡವೊಂದು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ದೋಣಿ ಮಗುಚಿ ಈ ದುರಂತ ನಡೆದಿತ್ತು.

ಘಟನೆಯಲ್ಲಿ ಕೆಲ ಮೀನುಗಾರರು ಈಜಿ ದಡ ಸೇರಿದ್ದರು. ಆದರೆ ಈ ಇಬ್ಬರು ಯುವಕರು ನಾಪತ್ತೆಯಾಗಿದ್ದರು, ಈ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು, ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದೆ.ಮೃತರನ್ನು ಮೀನುಗಾರರಾದ ಚರಣ್ ಹಾಗೂ ಅಪ್ಪಣ್ಣ ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಮೃತ ಮೀನುಗಾರರ ಕುಟುಂಬಕ್ಕೆ ಆರು ಲಕ್ಷ ಸರ್ಕಾರದ ಹಾಗೂ ವೈಯಕ್ತಿಕ ಪರಿಹಾರದ ಭರವಸೆಯನ್ನು ನೀಡಿದ್ದಾರೃ.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo