ನೇಕಾರರ, ಕರಕುಶಲ ಕರ್ಮಿಗಳ, ರೈತರ ಹಾಗೂ ಕಲಾವಿದ ಸಮಸ್ಯೆಗಳಿಗೆ ಎಂ.ಜಿ.ಎಂ ಸ್ಪಂದನೆ.
ಇದೇ 13 ರಿಂದ 16 ರ ವರೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನೈಸರ್ಗಿಕ ಬಣ್ಣ, ಪರಿಶುದ್ಧ ಹತ್ತಿಯ ಕೈಮಗ್ಗದ ಬಟ್ಟೆ ಹಾಗೂ ಇತರೆ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಕಾರ್ಯಾಗಾರ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಎಂ.ಜಿ.ಎಂ ಕಾಲೇಜು ಈ ಹಿಂದೆ ನಡೆಸಿದ್ದ ಪುಸ್ತಕೋತ್ಸವ, ಕೃಷಿ ಸಮ್ಮಿಲನ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 5 ಲಕ್ಷ ಮೌಲ್ಯದ ಪುಸ್ತಕಗಳು, 8 ಲಕ್ಷ ಮೌಲ್ಯದ ಕೃಷಿ ಉತ್ಪನ್ನಗಳು ಮಾರಾಟವಾಗಿ ಪ್ರಕಾಶಕರಿಗೆ, ಕೃಷಿಕರಿಗೆ ನೆರವಾಗಿತ್ತು. ಇದೇ ರೀತಿ ಸಾರ್ವಜನಿಕರ ಸ್ಪಂದನೆಯನ್ನು ಮತ್ತೊಮ್ಮೆ ಬಯಸುತ್ತಿದ್ದೇವೆ.
ಸೆಪ್ಟೆಂಬರ್ 13, 14,15,16. ಬೆಳಿಗ್ಗೆ 10 ರಿಂದ ಸಂಜೆ 8 ರ ವರೆಗೆ. ನೂತನ ರವೀಂದ್ರ ಮಂಟಪ, ಎಂ.ಜಿ.ಎಂ ಕಾಲೇಜು, ಉಡುಪಿ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ