Slider

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಕಾರು ಅಪಘಾತ :-ಬೆಂಗಳೂರು ಘಟನೆ ಮಾಸುವ ಮುನ್ನವೇ ಮತ್ತೊಂದು ಕಾರ್ ಆಕ್ಸಿಡೆಂಟ್

ಬೆಂಗಳೂರು: ತಮಿಳುನಾಡು ಡಿಎಂಕೆ ಶಾಸಕ ವೈ. ಪ್ರಕಾಶ್​ ಪುತ್ರನ ಕಾರು ಅಪಘಾತ ಮಾಸುವ ಮುನ್ನವೇ ಮತ್ತೊಂದು ಹೈಎಂಡ್ ಕಾರು ಅಪಘಾತ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಡಿಕ್ಕಿಯ ರಭಸಕ್ಕೆ‌ ಫೆರಾರಿ ಕಾರಿನಲ್ಲಿದ್ದ ಏರ್ ಬ್ಯಾಗ್​ಗಳು ಓಪನ್ ಆಗಿದ್ದರಿಂದ ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.
ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಖ್ ಒಡೆತನಕ್ಕೆ ಸೇರಿದ್ದಾಗಿದೆ. ಯಲಹಂಕ ಫ್ಲೈ ಓವರ್ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಏರ್ಪೋಟ್​ ಕಡೆಯಿಂದ ಯಲಹಂಕ ಕಡೆಗೆ ಕಾರು ಬರುತ್ತಿತ್ತು. ಆದ್ರೆ ಕಾರು ಚಲಾಯಿಸುತ್ತಿದ್ದವರು ಯಾರು ಎಂಬುದರ ಬಗ್ಗೆ ಪೊಲೀಸರು ಈವರೆಗೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇನ್ನು ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತವಾದ ಬಳಿಕ ಕೇಸ್ ದಾಖಲಿಸದ ಪೊಲೀಸರು ಕಾರು ಸಮೇತ ಅದರಲ್ಲಿದ್ದವರನ್ನು ಬಿಟ್ಟು ಕಳಿಸಿದ್ದಾರೆ.
ಫೆರಾರಿ ಕಾರು ಮುಂಬದಿಯ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಬಳಿಕ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಫೆರಾರಿ ಕಾರನ್ನು ಹೆಚ್ಚಾಗಿ ಬಿ.ಎಂ. ಫಾರೂಖ್ ಪುತ್ರಿ ಬಳಸುತ್ತಿದ್ರು. ಘಟನೆ ಬಳಿಕ ಪರಸ್ಪರ ರಾಜಿಯೊಂದಿಗೆ ಎರಡು ಕಾರಿನ ಚಾಲಕರು ವಾಪಾಸಾಗಿರುವ ಬಗ್ಗೆ ಮಾಹಿತಿ ಇದೆ. ಕಳೆದ ತಿಂಗಳಷ್ಟೇ ಅಪಘಾತವಾದ ಫೆರಾರಿ ಕಾರನ್ನು ಆರ್​ಟಿಒ ಅಧಿಕಾರಿಗಳು ಸೀಜ್ ಮಾಡಿದ್ದರು. ಕಾರಿನ ನೊಂದಣಿ ಪ್ರಕ್ರಿಯೆ ಅಪೂರ್ಣವಾಗಿರುವ ಹಿನ್ನೆಲೆ ಕಾರನ್ನ ಸಿಜ್ ಮಾಡಲಾಗಿತ್ತು. ಕಾರಿನ ದಾಖಲೆಗಳನ್ನು ಪರಿಶೀಲನೆ ನಡೆಸಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo