Slider


ಉಡುಪಿ:- ಹಾಡಹಗಲೇ ಚಿನ್ನಾಭರಣ ಕಳವು ನಗರದ ಚಿಟ್ಪಾಡಿಯಲ್ಲಿ ಕಳ್ಳರ ಕೈಚಳಕ

ಉಡುಪಿ, ಸೆ.3: ಕೊರೋನಾ ನಂತರದ ಅವಧಿಯಲ್ಲಿ ಜಿಲ್ಲೆಯ ನಾನಾ ಕಡೆಗಳಲ್ಲಿ ಮೋಸ, ವಂಚನೆಯಂತಹ ಕೃತ್ಯ ಹೆಚ್ಚಾಗಿ ಕೇಳಿಬರುತ್ತಿದೆ. ಇದರ ನಡುವೆ ಚಿನ್ನಾಭರಣ ತೊಳೆದು ಕೊಡುವ ನೆಪವನ್ನು ಹೇಳಿಕೊಂಡು ಮನೆಗೆ ಬಂದು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಚಿಟ್ಪಾಡಿ ಕಸ್ತೂರ್ಬಾ ನಗರದ ಕಂಬಳಕಟ್ಟ ಎಂಬಲ್ಲಿ ನಡೆದಿದೆ.
(file image)
ಈ ಕೃತ್ಯ ಜಲಜ ಎಂ.ಪೂಜಾರಿ (60) ಎಂಬವರ ಮನೆಮಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ಸುಮಾರು 40 ರಿಂದ 45 ವರ್ಷ ಪ್ರಾಯದ ಓರ್ವ ಅಪರಿಚಿತ ವ್ಯಕ್ತಿ ಬಂದು ಚಿನ್ನದ ಆಭರಣ ಗಳನ್ನು ತೊಳೆದು ಕೊಡುವುದಾಗಿ ಹೇಳಿದನು. ಅದರಂತೆ ಜಲಜರವರು ತನ್ನ ಕುತ್ತಿಗೆಯಲ್ಲಿದ್ದ 3 ಪಾವನ್ ಚಿನ್ನದ ಸರವನ್ನು ಆತನಿಗೆ ನೀಡಿದ್ದರು. ಆತ ಆ ಸರವನ್ನು ಮಹಿಳೆಗೆ ವಂಚಿಸಿ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಸೇರಿದ ಮೌಲ್ಯ ಸುಮಾರು 96000ರೂ ಎಂದು ಭಾವಿಸಿದ್ದಾರೆ.

ಈ ಕುರಿತು ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ಆರೋಪಿಯ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ.

ವರದಿ:-UDUPI FIRST

For advertisement contact:-

Call:- 86605 39735

            8548870937

                 or

Email us @:- Udupifirst@gmail.com

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo