ಸರ್ಕಾರ ಅಥಾ೯ತ್ ನಮ್ಮ ಅಧಿಕಾರಿಗಳ ಜನಪರ ಅಧಿಕಾರಿಗಳ ಕಾಯ೯ ಹೇಗಿರುತ್ತದೆ ಅಂದರೆ ಜನರಿಗೆ ಯಾವುದು ಕಾನುಾನಾತ್ಮಕವಾಗಿ ಬರ ಬೇಕು ಅದನ್ನು ಅವರಾಗಿ ಮಾಡುವುದಿಲ್ಲ ಆದರೆ ಯಾವ ಕಾನೂನು ಜನರಿಗೆ ತೊಂದರೆ ಕೊಡ ಬೇಕೊ ಅದನ್ನು ಅವರಾಗಿಯೇ ಮೂತುವಜಿ೯ವಹಿಸಿ ಮಾಡುತ್ತಾರೆ.ಇದಕ್ಕೆ ನಮ್ಮ ಸಾಕಷ್ಟು ಉದಾಹರಣೆಗಳು ನಮ್ಮಮುಂದೆ ಸಾಲುಸಾಲಾಗಿ ನಿಲ್ಲುತ್ತದೆ.
1.ಕೇೂಟು೯ ಹೇಳಿದೆ ದೇವಸ್ಥಾನಗಳು ಅಕ್ರಮವಾದ ಜಾಗದಲ್ಲಿ ಕಟ್ಟಿದ್ದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ ಅಂದಿರ ಬಹುದು ಅದನ್ನೇ ನಮ್ಮ ಅಧಿಕಾರಿಗಳು ಹಿಂದೆ ಮುಂದೆ ಆಲೇೂಚಿಸದೆ ದ್ವಂಸಕ್ಕೆ ಮುಂದಾಗಿದ್ದರು ಅನ್ನುವುದು ಅಷ್ಟೇ ಸ್ವಷ್ಟ.ಅದಕ್ಕೆ ಹೇಳುವುದು ನಮ್ಮ ಅಧಿಕಾರಗಳು ಜನರಿಗೆ ತೊಂದರೆ ಕಷ್ಟ ಆಗುವ ಕೆಲಸಗಳಿಗೆ ಹಿಂದೆ ಮುಂದೆ ನೇೂಡದೇ ಹೇಗೆ ತ್ವರಿತವಾಗಿ ಕಾಯ೯ ನಿವ೯ಹಿಸುತ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ.ಇಂತಹ ಅದೇಷ್ಟೊ ಪೀಡನ ಕೆಲಸಗಳು ನಮ್ಮ ನಿಮ್ಮ ಅನುಭವಕ್ಕೆ ದಿನ ನಿತ್ಯವೂ ಬಂದಿರುತ್ತದೆ.ಅವುಗಳನ್ನು ಎಳೆ ಎಳೆಯಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತೇನೆ.
>ಒಂದು ವೇಳೆ ನಾಳೆ ಇದೇ ಸುಪ್ರೀಂ ಕೇೂಟು೯ ತಾವು ನೀಡಿದ ತೀಪ೯ನ್ನು ಪುನರ್ ಉಚ್ಚರಿಸಿ ನಾವು ನಿಮಗೆ ಹೇಳಿದು ಅಕ್ರಮ ಜಾಗದಲ್ಲಿ ಕಟ್ಟಿದ ದೇವಸ್ಥಾನಗಳ ಸಕ್ರಮಾತಿಗೆ ಸೂಕ್ತ ಕ್ರಮ ತೆಗೆದು ಕೊಳ್ಳಿ ಅಂದ್ದದೇ ವಿನಾ ಕಟ್ಟಡ ಕೆಡವಿ ಎಂದು ಎಲ್ಲೂ ಹೇಳಿಲ್ಲ ಹಾಗಾಗಿ ಹಾಗಾಗಿ ಕೆಡವಿದ ದೇವಸ್ಥಾನ ಅದೇ ಜಾಗದಲ್ಲಿ ಅದೇ ರೀತಿಯಲ್ಲಿ ಕಟ್ಟಿ ಕೊಡಿ ಅಂದರೆ ಅದಕ್ಕೆ ನೀವು ಸಾವಿರಾರು ಕಾರಣಗಳನ್ನು ನೀಡುತ್ತೀರಿ ಅಲ್ವೆ?
2.ಒಬ್ಬ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾ ಮಾಡಿ ಅಂದು ಕೇೂಟು೯ ಹೇಳಿದರೆ ಸಾಕು ರಾತ್ರಿ ಬೆಳಗಾಗುವುದರೊಳಗೆ ಆ ನೌಕರರನನ್ನು ಮನೆಗೆ ಕಳುಹಿಸುತ್ತೀರಿ.ಅದೇ ಕೇುಾಟ೯ ಅದೇ ನೌಕರನನ್ನು ಕೆಲಸಕ್ಕೆ ಸೇರಿಸಿ ಕೊಳ್ಳಿ ಅಂದ್ರೆ ನೀವು ಖಂಡಿತವಾಗಿಯೂ ಈ ಕೆಲಸದಲ್ಲಿ ಮುಂದಾಗುವುದಿಲ್ಲ.ಬದಲಾಗಿ ಸಂಬಂಧಿಸಿದ ನೌಕರ ನಿಮ್ಮ ನ್ನು ಹೆಜ್ಜೆ ಹೆಜ್ಜೆ ಗುಾ ನೇುಾಡಿಕೆುಾಂಡರೆ ಮಾತ್ರ ಅವನ ಭಾಗ್ಯದ ಬಾಗಿಲು ತೆರೆಯ ಬಹುದು.ಅಂದರೆ ಪೀಡಿಸುವಾಗ ಕೇೂಟಿ೯ನ ತೀಪು೯ ನೆನಪಾಗುವುದಿಲ್ಲ ಅಲ್ವಾ?ಅಂದರೆ ನಮ್ಮ ಅಧಿಕಾರಿಗಳು ನ್ಯಾಯಾಂಗದ ನಿಂದನ ಕಾಯಿದೆ ಮುರಿಯಲು ಸಿದ್ದರಿದ್ದರಿ..ಅಲ್ವಾ?
3.ಸರಕಾರದಿಂದ ನಮಗೇನಾದರೂ ಅಲ್ಫ ಸ್ವಲ್ಪ ಹಣ ಬರ ಬೇಕಾಗಿದೆ ಅಂದರೆ ನಾವು ವಷ೯ ಗಟ್ಟಲೆ ಕಾಯ ಬೇಕು..ಅದಕ್ಕೂ ನಾವು ನೇೂಡಿಕೊಳ್ಳ ಬೇಕು..ಅದೇ ನಮ್ಮಿಂದ ಸರಕಾರಕ್ಕೆ ಕೊಡ ಬೇಕಾದರೆ ತಕ್ಷಣವೇ ನೀವು ಕಾನೂನತ್ಮಕ ವಾಗಿ ಮುಂದಾಗುತ್ತೀರಿ.ಹೇಗಿದೆ ನಿಮ್ಮಜನಪರ ಕೆಲಸ?
4.ಆದಾಯ ತೆರಿಗೆ ಕಟ್ಟಲು ತಡವಾದರೆ ವಿಶೇಷ ದಂಡ ವಿಧಿಸುತ್ತೀರಿ ಅದೇ ನಿಮ್ಮಿಂದ ನಮಗೆ ಹಣ ವಾಪಸು ಬೇಕೆಂದಾಗ ತಿಂಗಳು ಗಟ್ಟಲೆ ಕಾಯ ಬೇಕು.ಅದಕ್ಕೆ ಯಾವ ಬಡ್ಡಿ ಯೂ ಇಲ್ಲ..ಇಂತಹ ಸಾಕಷ್ಟು ಜೀವಂತ ಉದಾಹರಣೆಗಳು ಕಾಣ ಸಿಗುತ್ತದೆ.
ನಮ್ಮ ರಾಜಕಾರಣಿಗಳು ಅಷ್ಟೇ ದೇವಸ್ಥಾನ ಚಚು೯ ಮಸೀದಿ ಬಿದ್ದು ಹೇೂದರೆ ತಮಗೆ ಸಿಗುವ ಓಟು ಬಿದ್ದು ಹೇೂಗುತ್ತದೆ ಅನ್ನುವ ಒಂದೇ ಕಾರಣಕ್ಕೆ ಪ್ರಪಂಚವೇ ತಲೆಯ ಮೇಲೆ ಬಿದ್ದ ಹಾಗೆ ಬೊಬ್ಬೆ ಹಾಕುವುದು.ಸಾವ೯ಜನಿಕರನ್ನು ನೀವು ಮತ್ತು ನಿಮ್ಮ ಅಧಿಕಾರಿಗಳು ಹೇಗೆ ದಿನ ನಿತ್ಯವೂ ಪೀಡಿಸುತ್ತಾರೆ ಅನ್ನುವುದನ್ನು ಒಮ್ಮೆ ಕಣ್ಣು ಹಾಯಿಸಿ ನೇೂಡಿ..ಅನಂತರ ಮಾತನಾಡಿ..ನಿಮಗೆ ಮಾತನಾಡುವ ನೈತಿಕತೆ ಇದೆಯಾ..?ಆತ್ಮಾವಲೇೂಕನ ಮಾಡಿ ಕೊಳ್ಳಿ..
ಬರಹ:-ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ