Slider

ತಿರುವಿನಲ್ಲಿ ಓವರ್‌ಟೇಕ್ ಮಾಡಲು ಹೋಗಿ ಬೈಕ್ ಸವಾರ ಮೃತ್ಯು ಉಡುಪಿಯ ವರಂಗದಲ್ಲಿ ಧಾರುಣ ಘಟನೆ

ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ  ಬೈಕ್ ಸವಾರ ಓವರ್ ಟೇಕ್ ಮಾಡಲು ಹೋಗಿ  ಮೃತಪಟ್ಟ ದಾರುಣ ಘಟನೆ ಕಾರ್ಕಳದ ವರಂಗ ಎಂಬಲ್ಲಿ ಸಂಭವಿಸಿದೆ.  
ಜಿನ ದತ್ತ  ಜೈನ್ ಎಂಬವರು ಸೆಪ್ಟೆಂಬರ್ 15ರ ಬುಧವಾರ ಸಂಜೆ 6:15ರ ಸುಮಾರಿಗೆ ಕಾರ್ಕಳ ಕಡೆಯಿಂದ ಹೆಬ್ರಿ ಮಾರ್ಗವಾಗಿ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಇವರು ಅಪಾಯಕಾರಿ ತಿರುವಿನಲ್ಲಿ ತನ್ನ ಮುಂದಿನಿಂದ ಹೋಗುತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಯನ್ನು ಗಮನಿಸದೆ  ಇದ್ದ ಪರಿಣಾಮ ಅದಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದ. ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಲಾರಿಯವನು ಅವರ ಎದೆಯ ಮೇಲೆ ಲಾರಿಯ ಚಕ್ರವನ್ನು ಹತ್ತಿಸಿದ್ದ ಪರಿಣಿತಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಈ ಪ್ರಕರಣದ ಕುರಿತು ಹೆಬ್ರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 
  ಮೃತನ ಕುರಿತು ಮೃತನು ಜಿನ ದತ್ತ (42) ಎಂದು ತಿಳಿದುಬಂದಿದೆ. ಮೃತನು  ಸಾಗರ ತಾಲೂಕಿನ ಸಿಗಂದೂರು ಗ್ರಾಮದ ಮೂಲದವರು ಎಂದು ತಿಳಿದುಬಂದಿದೆ.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo