ಉಡುಪಿ: ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು
ಉಡುಪಿ: ಶಾರದಮಂಟಪ ಕಡೆಯಿಂದ ವಿದ್ಯೋದಯ ಕಾಲೇಜಿನತ್ತ ತೆರಳುವ ರಸ್ತೆಯಲ್ಲಿ ಚರಂಡಿ ಕಾಮಗಾರಿ ಸರಿ ಮಾಡುವುದೆಂದು ನಿರ್ಧರಿಸಿ ರಸ್ತೆಯನ್ನು ಕಾರ್ಮಿಕರು ಅಗೆದಿರುವುದು ಕಂಡುಬಂದಿದೆ. ಆದರೆ ಚರಂಡಿ ಕಾಮಗಾರಿ ಪ್ರಾರಂಭಿಸಿ ತಿಂಗಳುಗಳೇ ಕಳೆದರು ಕಾಮಗಾರಿ ಮುಕ್ತಾಯಗೊಳಿಸುವ ಲಕ್ಷಣಗಳೇನು ಕಂಡುಬರುತ್ತಿಲ್ಲ.ಸದ್ಯಕ್ಕೆ ರಸ್ತೆಯಲ್ಲಿ ಅನೇಕ ಕೇಸರಿಮಯ ಸ್ವಿಮ್ಮಿಂಗ್ ಪೂಲ್ ಗಳು ನಿರ್ಮಾಣವಾಗಿದ್ದು ಇನ್ನೆರಡು ಮಳೆಗಲವಾದರೆ ವಾಹನಗಳಿಗಿಂತ ತೆಪ್ಪಗಳೆ ಇಲ್ಲಿ ಸಂಚರಿಸಲು ಸೂಕ್ತ.ರಸ್ತೆ ಮದ್ಯ ಗುಂಡಿಯೋ ಗುಂಡಿ ಮದ್ಯೆ ರಸ್ತೆಯೋ ತಿಳಿಯದಂತಾಗಿದೆ.
ಚರಂಡಿ ಕಾಮಗಾರಿಯ ದುರಸ್ತಿಗೊಳಿಸುವ ಸಂದರ್ಭದಲ್ಲಿ ರಸ್ತೆ ಹೊಂಡ ಗುಂಡಿಗಳಿಂದ ತೀವ್ರ ಹದಗೆಟ್ಟು ಹೋಗಿದೆ.ಅದರ ಜೊತೆಗೆ ಈ ರಸ್ತೆಯಲ್ಲಿ ಜನರಿಗೆ ಸಂಚರಿಸಲು ಸಹ ಕಷ್ಟವಾಗಿ ಪರಿಣಮಿಸಿದೆ. ಈಗಾಗಲೇ ದ್ವಿಚಕ್ರ ವಾಹನ ಸವಾರರು ಚರಂಡಿಗಾಗಿ ರಸ್ತೆಯಲ್ಲಿ ತೋಡಲಾದ ಗುಂಡಿಗಳಿಗೆ ಆಯಾತಪ್ಪಿ ಬಿದ್ದು ಪೆಟ್ಟಾಗಿರುವ ಘಟನೆಗಳು ಈ ಚರಂಡಿ ಕಾಮಗಾರಿಗೆ ಸಾಕ್ಷಿಯಾಗಿವೆ.
ಸದ್ಯಕ್ಕೆ ರಸ್ತೆಯನ್ನು ಸರಿಮಾಡುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ 100ಮೀಟರ್ ಗು ಅಧಿಕ ಉದ್ದದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸಾರ್ವಜನಿಕ ಜನಜೀವನಕ್ಕೆ ತೀವ್ರ ತೊಂದರೆಯನ್ನುಂಟ ಮಾಡಿದೆ ಇದರ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿದೆ.ಇಲ್ಲವಾದರೆ ಬರುವ ಮಳೆಗಾಲದ ಸಂದರ್ಭದಲ್ಲಿ ಹೈನುಗಾರಿಕೆ ಮಾಡಲು ಸೂಕ್ತ ಪ್ರದೇಶವಾಗಿದೆ.
ಈ ಇಂದರ್ಭದಲ್ಲಿ ಘಟನ ಸ್ಥಳಕ್ಕೆ ಉಡುಪಿ ಫಸ್ಟ್ ನ ಪ್ರತಿನಿಧಿ ವಿಷಯ ಪರೀಶಿಲನೆಗೆ ತೆರಳಿದ್ದು ಸಾರ್ವಜನಿಕರೊಬ್ಬರು ಈ ರಸ್ತೆಯ ಕುರಿತು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Udupi first
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ