AD
ಈ ಪ್ರತಿಭಟನೆಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ಅನುಮತಿಯಲ್ಲಿ ಪಡೆಯಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಂತಿಯುತವಾದ ಪ್ರತಿಭಟನೆಯನ್ನು ನಡೆಸಲಾಗಿತ್ತು, ಆದರೆ ಪ್ರತಿಭಟನೆ ಮುಗಿದ ಬಳಿಕ ಉಡುಪಿ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮತ್ತು ವೃತ್ತ ನಿರೀಕ್ಷರ ಆದೇಶದ ಮೇರೆಗೆ ಹಲವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಸುಮಾರು 12 ಗಂಟೆ ರಾತ್ರಿಯ ತನಕ ಕಾಯಿಸಿ ಕೇಸು ದಾಖಲಿಸಿ ಬಿಟ್ಟಿರುತ್ತಾರೆ. ಅಲ್ಲದೇ ನಮ್ಮ ಈ ಪ್ರತಿಭಟನಾ ಸಭೆಗೆ ಅತಿಥಿಗಳಾಗಿ ಭಾಗವಹಿಸಿದ ಅತಿಥಿಗಳ ಮೇಲು ಹಾಗೂ ಮಹಿಳಾ ಅತಿಥಿಗಳ ಮೇಲು ದಾಖಲಿಸಿರುತ್ತಾರೆ.
ಈ ಆತ್ಯಾಚಾರ ಪ್ರಕರಣ ದೇಶದ ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವಂತಾ ಹಿನಾ ಕೃತ್ಯವಾಗಿದ್ದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ಖಂಡಿಸುತ್ತಾನೆ. ಆದ್ರೆ ಉಡುಪಿಯ ನಗರ ಠಾಣೆಯ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮತ್ತು ವೃತ್ತ ನೀರಿಕ್ಷಕರು ಯಾರ ಒತ್ತಡಕ್ಕೆ ಮಣಿದು ಕಾರ್ಯಕ್ರಮ ಆಯೋಜಕರ ಮೇಲೆ ಕೇಸ್ ದಾಖಲಿಸಿದ್ದಾರೆ? ಸಂವಿಧಾನ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೇ. ಆದ್ರೆ ಪ್ರತಿಭಟಿಸುವ ಹಕ್ಕನ್ನು ಕಸಿಯುವ ಮೂಲಕ ಜಿಲ್ಲೆಯಲ್ಲಿ ಎಸ್ಬಿಪಿಐ ಧಮನಿಸುವ ವಾತಾವರಣವನ್ನು ಸೃಷ್ಟಿಸಲು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಮುಂದಾಗಿರುದನ್ನು ಎಸ್ಟಿಪಿಐ ಖಂಡಿಸುತ್ತದೆ. ಅಲ್ಲದೇ ಇಂತಹ ಪ್ರತಿಭಟಿಸುವ ಹಕ್ಕನ್ನು ಕಸಿಯುತ್ತಿರುವ ಪೋಲಿಸ್ ಇಲಾಖೆಯ ವಿರುದ್ಧ ಕಾನೂನು ಹೋರಾಟಕ್ಕೂ ಎಸ್ಬಿಪಿಐ ಬದ್ದವಾಗಿದೆ ಎಂದು ತಿಳಿಸಿದ್ದಾರೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ