ಜಿಲ್ಲೆಯಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಕೋವಿಡ್ ೧೯ ತಡೆಗಟ್ಟುವ ಉದ್ದೇಶದಿಂದ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಗೆ ನೀರಸ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ವಾಹನ ಸಂಚಾರ ಕೂಡ ಎಂದಿನಂತೆ ನಡೆಯುತ್ತಿದೆ.
ನಗರದ ಬೆರಳೆಣಿಕೆಯಷ್ಟು ವಾಣಿಜ್ಯ ಮಳಿಗೆಗಳನ್ನು ಮಾತ್ರ ಬಂದ್ ಮಾಡಲಾಗಿದ್ದು ಉಳಿದಂತೆ ಎಲ್ಲವೂ ಓಪನ್ ಆಗಿದೆ.ಇನ್ನು ಬಸ್‌ಗಳು ಕೂಡ ಎಂದಿನಂತೆ ಸಂಚರಿಸುತ್ತಿವೆ, ಹೀಗಾಗಿ ಜಿಲ್ಲಾಡಳಿತದ ವಾರಾಂತ್ಯ ಕರ್ಫ್ಯೂ ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ