Slider

ಹಂಗಾರಕಟ್ಟೆ: ಸರ್ವೋದಯ ಯುವಕ ಮಂಡಲದ ಆಶ್ರಯದಲ್ಲಿ ಹಿಂದು ರುದ್ರಭೂಮಿಯ ಸ್ವಚ್ಚತಾ ಕಾರ್ಯ.

ಬಾಳ್ಕುದ್ರು: ಕಳೆದ ಎರಡು ವಾರಗಳಿಂದ ಸ್ವಯಂ ಪ್ರೇರಿತವಾಗಿ ಸರ್ವೋದಯ ಯುವಕ ಮಂಡಲದ ಯುವಕರು ಬಾಳ್ಕದ್ರು ಗ್ರಾಮದ ಸ್ವಚ್ಚತಾ ಕಾರ್ಯಕ್ಕೆ ಶ್ರಮಿಸುತಿದ್ದು  ಈ ಬಾರಿ ಮೂರನೇ ವಾರದ ಸ್ವಚ್ಚತಾ ಕಾರ್ಯಕ್ರಮಕ್ಕೆ ಗ್ರಾಮದ ರುದ್ರಭೂಮಿಯಲ್ಲಿ ಚಾಲನೆ ನೀಡಲಾಯಿತು.
ಈ ನಿಟ್ಟಿನಲ್ಲಿ ರುದ್ರಭೂಮಿಗೆ ತೆರಳುವ ರಸ್ತೆಯ ಕಡೆಗಳಲ್ಲಿ ಅಧಿಕಗಾತೃದ ಹುಲ್ಲುಗಳು ಬೆಳೆದಿದ್ದು ಸತ್ತ ಶವಗಳನ್ನು ರುದ್ರಭೂಮಿ ಗೆ ಸಾಗಿಸುವಾಗ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತಿತ್ತು. ಇದಲ್ಲದೆ ಶವಗಳನ್ನು ಹೊತ್ತು ತರುವ ಅಂಬುಲೆನ್ಸ್ ಚಾಲಕರಿಗು ತಮ್ಮ ಗಾಡಿ ತಿರುಗಿಸಲು ತೊಂದರೆಯಾಗುತ್ತಿತ್ತು.
 ಈ ವಿಷಯವನ್ನು ಮನಗಂಡ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ರಸ್ತೆಯನ್ನು ತೆರವುಗೊಳಿಸಿ ರಸ್ತೆಯನ್ನು ಗುಡಿಸುವುದರ ಮೂಲಕ ಶುಚಿತ್ವಗೊಳಿಸಿದರು. ನಂತರ ರುದ್ರಭೂಮಿಗೆ ತೆರಳಿ ಒಳಗಡೆ ಶವ ಆಹುತಿಗೊಳಿಸಲು ಬರುವ ಜನರು ಎಸೆದಿರುವ ನೀರಿನ ಬಾಟಲಿ, ಒಡೆದ ಮಡಕೆಗಳನ್ನೆಲ್ಲ ಹೆಕ್ಕಿ ನಂತರದಲ್ಲಿ ಹುಲ್ಲುಗನ್ನೆಲ್ಲ ಕಿತ್ತು ಗುಡಿಸಿ ಸ್ವಚ್ಚತೆಯನ್ನು ಕಾಪಾಡಿ ಎನ್ನುವ ಸಂದೇಶವನ್ನು ಜನರಲ್ಲಿ  ಮೂಡಿಸಿದರು.
ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು ಇನ್ನು ನಿಮ್ಮ ಸಂಸ್ಥೆಯಿಂದ ಇಂತಹ ಹತ್ತು ಹಲವು ಸಮಾಜಪರ ಕಾರ್ಯಕ್ರಮಗಳು ನಡೆಯಲಿ ಎಂದು ಯುವಕರನ್ನು ಹುರಿದುಂಬಿಸಿದರು.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo