Slider


ಸ್ಪೀಕರ್‌ ಆ"ಸ್ಥಾನದ "ಬಗ್ಗೆ ಒಂದಿಷ್ಟು ಜಿಜ್ಞಾಸೆ:-ಬರಹ:-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

ಸ್ಪೀಕರ್‌ ಆ"ಸ್ಥಾನದ "ಬಗ್ಗೆ ಒಂದಿಷ್ಟು ಜಿಜ್ಞಾಸೆ?:ನಿನ್ನೆ ತಾನೇ ಕನಾ೯ಟಕ ವಿಧಾನ ಮಂಡಲದಲ್ಲಿ ಲೇೂಕ ಸಭಾಧ್ಯಕ್ಷರ ವಿಶೇಷ ಉಪನ್ಯಾಸ ಬಗ್ಗೆ ಒಂದಿಷ್ಟು ಬರೆದಿದ್ದೆ.ಅದರಲ್ಲಿ ಕೂಡಾ ಒಂದು ವಿಷಯವನ್ನು ಸ್ವಷ್ಟವಾಗಿ ಹೇಳಿದ್ದೆ.ಸದನದ ಅಧ್ಯಕ್ಷತೆಯನ್ನು ಸಂಬಂಧ ಪಟ್ಟ ಸದನದ ಅಧ್ಯಕ್ಷರೇ ವಹಿಸ ಬೇಕು.ವಿಶೇಷ ಅತಿಥಿಯಾಗಿ ಬಂದವರಿಗೆ ಉಪನ್ಯಾಸ ಮಾಡಲು ಅವಕಾಶ ಕೊಡೇೂಣ ಜೊತೆಗೆ ಬೇರೊಂದು ಆಸನವನ್ನು ಏಪ೯ಡಿಸ ಬೇಕೆಂಬುವುದು ನನ್ನ ಲೇಖನದ ಆಶಯವಾಗಿತ್ತು.ಆದರೆ ಮುಖ್ಯ ಅತಿಥಿಯಾಗಿ ಅಭ್ಯಾಗತರಾದ ಲೇೂಕ ಸಭಾ ಸ್ಪೀಕರ್‌ ಆಸೆಂಬ್ಲಿ ಸ್ಪೀಕರ್‌ ರ ಆ ಸ್ಥಾನದ ಕುಚಿ೯ಯಲ್ಲಿ ಕೂತು ಸಭೆಯನ್ನು ನಡೆಸಿರುವುದು ಸದನದ ಘನತೆಗೆ  ಚ್ಯುತಿ ಬಂದಿದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ.ಇದು ಸದನದ ಶಿಷ್ಟಾಚಾರಕ್ಕೆ ಹೊಂದುವ ಆಸನದ ವ್ಯವಸ್ಥೆ ಅಲ್ಲ.(ಅದಕ್ಕಾಗಿ ಚಿತ್ರ ಲಗ್ತೀಕರಿಸಿದ್ದೇನೆ) ಇದಕ್ಕೆ ನಾನು ಕೊಡುವ ಕಾರಣಗಳೆಂದರೆ.
1.ಸದನದ ಅಧ್ಯಕ್ಷರು ಅಂದರೆ ಅವರು ಸದನದ ಸದಸ್ಯರಿಂದ ಚುನಾಯಿತರಾದ ಅಧ್ಯಕ್ಷರಾದ ಸಭೆಯ ಅಧ್ಯಕ್ಷತೆಯನ್ನು ಅವರೇ ವಹಿಸ ಬೇಕು.ಅವರ ಕುಚಿ೯ಯಲ್ಲಿ ಅವರೇ ಕುಳಿತು ಕೊಳ್ಳ ಬೇಕು.ಇದು ಉತ್ತಮ ಶಿಷ್ಟಾಚಾರವೂ ಹೌದು.ಅದು ಲೇೂಕ ಸಭೆ ಇರ ಬಹುದು ರಾಜ್ಯ ಎಸೆಂಬ್ಲಿಯೇ ಇರ ಬಹುದು. ಅದರಲ್ಲಿ ದೊಡ್ಢದು ಚಿಕ್ಕದ್ದು ಅನ್ನುವ ಪ್ರಶ್ನೆಯೇ ಇಲ್ಲ.ಸರಕಾರದ ಕೆಲವೊಂದು ಕಾಯ೯ಕ್ರಮ ಮಾಡುವಾಗ ಕೆಲವೊಂದು ಪ್ರೊಟೊಕಾಲ್ ಅಥವಾ ಶಿಷ್ಟಾಚಾರ ಪಾಲಿಸುತ್ತೇವೆ.ಉದಾ: ಒಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಗುವ ಕಾಯ೯ಕ್ರಮಕ್ಕೆ ಮುಖ್ಯಮಂತ್ರಿಗಳೇ ಮುಖ್ಯ ಅತಿಥಿಯಾಗಿ ಬಂದಾಗ ಕೂಡಾ ಸ್ಥಳೀಯ ಪಂಚಾಯತ್ ಅಧ್ಯಕ್ಷರೇ ಸಭೆಯ ಅಧ್ಯಕ್ಷತೆವಹಿಸ ಬೇಕು.ಅಂದರೆ ಇದರ ಅಥ೯ ಮುಖ್ಯಮಂತ್ರಿಗಳಿಗೆ ಅವಮಾನವೆಂದಥ೯ವಲ್ಲ.ಅದೇ ರೀತಿಯಲ್ಲಿ ಸದನದ ಒಳಗೆ ಸಭಾಧ್ಯಕ್ಷರೇ ಮೊದಲ ವ್ಯಕ್ತಿ.ಅವರ ನಿಧಾ೯ರವೇ ಅಂತಿಮ ಅನ್ನುವುದು ಸುಪ್ರೀಂ ಕೇೂಟು೯ ನೀಡಿದ ತೀಪು೯ ಕೂಡಾ.ಆದುದರಿಂದ ಸದನದ ಘನತೆಗೆ ಚ್ಯುತಿ ಬಾರದ ಹಾಗೆ ಇಂತಹ ಕಾಯ೯ಕ್ರಮಗಳನ್ನು ಸಂಯೇೂಜಿಸ ಬೇಕಾದದ್ದು ಸಭಾಧ್ಯಕ್ಷರ ಕಛೇರಿಯ ಹಿರಿಯ ಅಧಿಕಾರಿಗಳ ಕತ೯ವ್ಯ ಕೂಡಾ.
ಹಾಗಾದರೆ ರಾಷ್ಟ್ರ ಪತಿಗಳು/ರಾಜ್ಯ ಪಾಲರು ಅಂದಾಗ  ಅಲ್ಲಿ ಒಂದು ಸಂವಿಧಾನಿಕವಾದ ಅಂಶವಿದೆ.ರಾಷ್ಟ್ರ ಪತಿಗಳು/ರಾಜ್ಯ ಪಾಲರು ಸಂಸತ್ತಿನ /ಆಸೆಂಬ್ಲಿಯ ಭಾಗವೇ ಆಗಿರುತ್ತೆ.ಉದಾ:ಸಂವಿಧಾನದಲ್ಲಿಯೆ ವ್ಯಾಖ್ಯಾನಿಸಿದಂತೆ "ಸಂಸತ್ತು ಅಂದರೆ ರಾಷ್ಟ್ರ ಪತಿಗಳು ಮತ್ತು ಎರಡೂ ಸದನಗಳ ಅಂಗ"
ಹಾಗೇನ್ನುವಾಗ ಸದನದ ಅಧ್ಯಕ್ಷತೆಯನ್ನುಎಲ್ಲಾ ಸಂದರ್ಭದಲ್ಲಿ ಆಯಾಯ ಸದನದ ಅಧ್ಯಕ್ಷರೇ ವಹಿಸುವುದು ಉತ್ತಮ ಶಿಷ್ಟಾಚಾರ ಅನ್ನಿಸಿಕೊಳ್ಳುತ್ತದೆ.ಈ ಕುರಿತಾಗಿ ನಮ್ಮ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ ಆದರೆ ಕೆಲವೆುಾಂದು ಆರೇೂಗ್ಯ ಪೂಣ೯ವಾದ ನಡವಳಿಕೆಗಳನ್ನು  ಪಾಲಿಸುವುದು ಸಂಸದೀಯ ಮೌಲ್ಯ ಹಿತದೃಷ್ಟಿಯಿಂದ ಅಗತ್ಯ ಅನ್ನುವುದು ನನ್ನ ಖಚಿತ ಅಭಿಪ್ರಾಯ.=>
ಬರಹ:-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo