ಮಲ್ಪೆ: ಕಳೆದ ಮೂರ್‍ನಾಲ್ಕು ದಿನಗಳಿಂದ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿಯಿಂದಾಗಿ ಆಳಸಮುದ್ರದಲ್ಲಿ ಗೊಂದಲ ಉಂಟಾಗಿದ್ದ ಪರಿಣಾಮ ಬೋಟ್‌ಗಳು ಮೀನುಗಾರಿಕೆ ತೆರಳಲಾಗದೆ ಬುಧವಾರದಿಂದ ಬಹುತೇಕ ದೋಣಿಗಳು ದಡ ಸೇರಿವೆ.
1ರಿಂದ ಮೀನುಗಾರಿಕೆ ಋತು ಆರಂಭವಾಗಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿರುವಾಗಲೇ ಮತ್ತೆ ಪ್ರಾಕೃತಿಕ ವೈಪರೀತ್ಯ ಉಂಟಾಗಿದೆ. ಈ ಸಮಯದಲ್ಲಿ ಆಳಸಮದ್ರ ಪರ್ಸಿನ್ ಮೀನುಗಾರರಿಗೆ ಬಂಗುಡೆ, ಬೊಂಡಾಸ್ ಮೀನುಗಳು ಲಭಿಸುತ್ತಿದ್ದು, ಕೊಂಚ ಆದಾಯ ಗಳಿಸುವಷ್ಟರಲ್ಲೇ ಮತ್ತೆ ಪ್ರಕ್ಷುಬ್ಧ ವಾತಾವರಣದಿಂದ ಮೀನುಗಾರಿಕೆ ನಡೆಸದಂತಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಸಮುದ್ರದಲ್ಲಿ ಗಾಳಿಯಿಂದಾಗಿ ನೀರಿನ ಒತ್ತಡವೂ ಹೆಚ್ಚಾಗಿದೆ ಎಂದು ಮೀನು ಗಾರರು ತಿಳಿಸಿದ್ದಾರೆ. ಈಗಾಗಲೇ ಮಲ್ಪೆ ಬಂದರಿನಲ್ಲಿ ಶೇ. 60ರಷ್ಟು ಬೋಟ್‌ಗಳು ಲಂಗರು ಹಾಕಿವೆ.
ಮತ್ತಿನ್ನುಳಿದ ಬೋಟುಗಳು ಕಾರವಾರ, ಗೋವಾದ ವಾಸ್ಕೋ, ಮಹಾರಾಷ್ಟ್ರದ ಬಂದರುಗಳನ್ನು ಆಶ್ರಯಿಸಿವೆ.
ಮಲ್ಪೆ ಬಂದರಿನಲ್ಲಿ ಈಗಾಗಲೇ ಮೀನುಗಾರಿಕೆ ನಡೆಸಿ ವಾಪಸ್ ಬಂದಿರುವ ಬೋಟ್‌ಗಳು ಮತ್ತೆ ಪುನಃ ಮೀನುಗಾರಿಕೆಗೆ ತೆರಳಿಲ್ಲ. ಬಹುತೇಕ ಬೋಟ್‌ಗಳು ಚೌತಿಹಬ್ಬದ ಅನಂತರ ಕಡಲಿಗಿಳಿಯಲು ನಿರ್ಧರಮಾಡಿವೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ