ಉಡುಪಿ: ಜಿಲ್ಲೆಯ ಸಂತೆಕಟ್ಟೆಯ ಕಲ್ಯಾಣಪುರ ಗೋಪಾಲಪುರ 5ನೇ ಮುಖ್ಯರಸ್ತೆಯಲ್ಲಿರುವ ಅಶೋಕ್ ಪೂಜಾರಿ ಎಂಬವರ ಮನೆಯಲ್ಲಿ ರಾತ್ರೋ ರಾತ್ರಿ ಕಳ್ಳರು ದರೋಡೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ
ಕಳ್ಳರು ಬಂದು ಮೊದಲು ಮನೆಯ ಹಿಂದಿನ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಿದ್ದಾರೆ.
ಅಶೋಕ್ ಮೂಲತಃ ಪುಣೆಯಲ್ಲಿ ವಾಸವಾಗಿದ್ದು ಅವರ ಗೋಪಾಲಪುರದಲ್ಲಿರುವ ಮನೆಗೆ ಬೀಗ ಹಾಕಲಾಗಿತ್ತು.
ಮನೆಗೆ ಬರುವ ಕೆಲಸದಾಕೆ ಮನೆಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲು ಮುರಿದಿರುವುದು ಕಂಡು ಗಾಬರಿಯಾಗಿ ನೆರೆಮನೆಯವರಿಗೆ ವಿಷಯ ತಿಳಿಸಿದ್ದಾಳೆ.
ನೆರೆಮನೆಯ ಸಿಬ್ಬಂದಿ ಪಡುಬಿದ್ರೆಯಲ್ಲಿರುವ ಅಶೋಕ್ ಪೂಜಾರಿಯವರ ಸಹೋದರ ಸುರೇಶ್ ರನ್ನು ಕರೆದು ಅವರು ಮನೆಗೆ ಬಂದು 75,000 ಮೌಲ್ಯದ ಹೊಸ ಟಿ.ವಿ , ಬೆಲೆ ಬಾಳುವ ನಗದು ವಸ್ತು, ಮತ್ತು ಮನೆಯಲ್ಲೇ ನಿಲ್ಲಿಸಿದ ಕಾರನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಘಟನೆ ಸ್ಥಳಕ್ಕೆ ಬಂದು ಪೋಲಿಸ್ ಸಿಬ್ಬಂದಿ ಮನೆಯ ಸಿಸಿಟಿವಿ ಫೂಟೇಜ್ ನಲ್ಲಿ ವೀಕ್ಷಿಸಿ ಕಳ್ಳರಿಗೆ ಬೆಲೆ ಬೀಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ