ಉಡುಪಿ:- ಖ್ಯಾತ ನಟ, ಸಿಂಪಲ್ ಸ್ಟಾರ್, ರಕ್ಷಿತ್ ಶೆಟ್ಟಿ ಅಲೆವೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೋಂಡು ವಿಘ್ನ ನಿವಾರಕನ ದರ್ಶನ ಪಡೆದರು.
ಕುಟುಂಬ ಸದಸ್ಯರೊಡನೆ ಆಗಮಿಸಿ ಅಲೆವೂರಿನ, ಗುಡ್ಡೆಯಂಗಡಿ ಜಂಕ್ಷನ್‌ನಲ್ಲಿರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೋಂಡರು. ಈ ವೇಳೆ ಅವರ ಅಣ್ಣ ಅತ್ತಿಗೆ, ಮತ್ತು ಮಕ್ಕಳು ಅವರೊಂದಿಗೆ ಉಪಸ್ಥಿತರಿದ್ದರು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಕ್ಷಿತ್ ಶೆಟ್ಟಿ ವೈಯಕ್ತಿಕ ಮತ್ತು ವೃತ್ತಿ ಜೀವನ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಲಾಯ್ತು. ರಕ್ಷಿತ್ ಕುಟುಂಬ ಅಲೆವೂರು ಕಟ್ಟೆ ಗಣಪತಿಯ ಪ್ರಸಾದ ಸ್ವೀಕರಿಸಿದರು. ಲೆಟ್ಸ್ ಕಿಲ್ ಗಾಂಧಿ ಎಂಬ ಕಿರುಚಿತ್ರದ ಮೂಲಕ ರಕ್ಷಿತ್ ಬಣ್ಣದ ಬದುಕನ್ನು ಆರಂಭ ಮಾಡಿದ್ದರು. ಆ ಸಂದರ್ಭ ಅಲೆವೂರು ಕಟ್ಟೆ ಗಣಪತಿ ಗುಡಿಯಲ್ಲೇ ಮೊದಲ ಪೂಜೆ ಸಲ್ಲಿಕೆ ಮಾಡಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ