ಉಡುಪಿ:-ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಎಂದಿನಂತೆ ಅನ್ನಪ್ರಸಾದ ಪ್ರಾರಂಭ
ಕೋವಿಡ್ ಕಾರಣದಿಂದಾಗಿ ವರ್ಷಕ್ಕೂ ಅಧಿಕ ಕಾಲ ಸ್ಥಗಿತಗೊಂಡಿದ್ದ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿದ್ದ ಅನ್ನಸಂತರ್ಪಣೆ ಕಾರ್ಯ ಮತ್ತೆ ಪ್ರಾರಂಭವಾಗಿದೆ.ಕೃಷ್ಣಮಠದಲ್ಲಿ ಭಕ್ತರಿಗೆ ಬಡಿಸುವ ಅನ್ನಪ್ರಸಾದಕ್ಕೆ ಬಹಳ ಮಹತ್ವವಿದೆ.ತಮ್ಮ ಪರ್ಯಾಯದ ಅವಧಿಯಲ್ಲಿ ಎಲ್ಲ ಭಕ್ತರಿಗೂ ಯಥೇಚ್ಛ ಅನ್ನಪ್ರಸಾದ ಸಿಗಬೇಕು ಎಂಬುದು ಅಷ್ಠಮಠಾಧೀಶರುಗಳ ಕನಸು.ಆದರೆ ಈ ಬಾರಿಯ ಪರ್ಯಾಯದ ಪ್ರಾರಂಭದಲ್ಲೇ ಕೊರೋನಾ ಮಹಾಮಾರಿ ಅಪ್ಪಳಿಸಿತು.ಇದರ ಪರಿಣಾಮವಾಗಿ ಸ್ಥಗಿತಗೊಂಡಿದ್ದ ಅನ್ನಪ್ರಸಾದ ಇವತ್ತಿನಿಂದ ಮತ್ತೆ ಆರಂಭಗೊಂಡಿದೆ.
ವರದಿ: UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ