Slider

ಹಂಗಾರಕಟ್ಟೆ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಿನ್ನೆಲೆ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಮಹಾ ಲಸಿಕಾ ಮೇಳ

ಬಾಳ್ಕುದ್ರು: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಕೋವಿಡ್ 19 ಲಸಿಕಾ ಮೇಳ ನಡೆಯುತ್ತಿದ್ದು ಅಂತೆಯೆ ಬಾಳ್ಕದ್ರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ವಾಗೀಶ ಮಂಟಪದಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಮತ್ತು ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೋವಿಡ್ 19 ಮಹಾಲಸಿಕ ಮೇಳ ಬೆಳಿಗ್ಗೆ 8:00 ಸಂಜೆ 5:00ವರೆಗೆ ಜರುಗಿತು.


ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ವಿಠಲ್ ಪೂಜಾರಿಯವರು ಹಾಜರಿದ್ದು ಕೋವಿಡ್ 19 ಆರಂಭವಾದಂದಿನಿಂದ ರಾಜ್ಯ ಮತ್ತು ಕೇಂದ್ರದ ಬಿ.ಜೆ.ಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಈದರ ಜೊತೆ ಜನರ ಆರೋಗ್ಯದ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆ ನಿರಂತರ ಸಂಪರ್ಕ ಇಟ್ಟಕೊಂಡು ಉತ್ತಮ ಕಾರ್ಯ ನಿರ್ವಹಿಸುತ್ತಿದೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ಸೌಲಭ್ಯವನ್ನು ಸಹ ಒದಗಿಸಲಾಗುತ್ತಿದೆ,
ಜನರು ಈ ಉಚಿತ ಲಸಿಕೆಯ ಸದುಪಯೋಗ ಪಡೆದುಕೊಳ್ಳುವುದೆ ನಾವು ಮೋದಿಜಿಯವರಿಗೆ ಕೊಡುವ ದೊಡ್ಡ ಉಡುಗೊರೆ ಎಂದು ಹೇಳಿದರು.

ಶಾಲೆಯಲ್ಲಿ ಒಟ್ಟು ಕೊವೀಡ್ 19 ಪ್ರಥಮ ಮತ್ತು ದ್ವಿತೀಯ 250 ಲಸಿಕೆ ಲಭ್ಯವಿದ್ದು ಗ್ರಾಮದ ಜನರೆಲ್ಲ ಬೆಳಿಗ್ಗೆ ಬೇಗನೆ ಶಾಲೆಯ ವಾಗೀಶ ಮಂಟಪಕ್ಕೆ ಆಗಮಿಸಿ ಲಸಿಕೆಯನ್ನು ಪಡೆದರು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನದ ಅಂಗವಾಗಿ ಲಸಿಕೆಯನ್ನು ಪಡೆಯಲು ಬಂದವರಿಗೆ ಸಿಹಿಯನ್ನು ವಿತರಿಸಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು..


ಈ ಸಂದರ್ಭದಲ್ಲಿ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮರ್ ನರ್ಸ್ ಸೀಮಾ ಮತ್ತು ಸ್ಟಾಫ್ ನರ್ಸ್ ಜಯಂತಿ. ರಾಜ್ಯ ಹಿಂದುಳಿದವರ್ಗದ ಮೋರ್ಚ ಕಾರ್ಯದರ್ಶಿ ವಿಠಲ್ ಪೂಜಾರಿ, ಮತ್ತು ಐರೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನ್.ಕೆ. ಪೂಜಾರಿ , ಸುಲೋಚನಾ, ಕಿರಣ್ ತೋಮಸ್, ಸುಬ್ರಹ್ಮಣ್ಯ ಅಧಿಕಾರಿ, ಮತ್ತಿತರರು ಉಪಸ್ಥಿತರಿದ್ದರು.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo