Slider

ಮನೆಗೆ ನುಗ್ಗಿ ನಗದು ಬೆಲೆಬಾಳುವ ವಸ್ತುಗಳನ ಕಳ್ಳತನ :-ಉಚ್ಚಿಲದಲ್ಲಿ ಘಟನೆ

ಉಚ್ಚಿಲ: ಉಚ್ಚಿಲ ಬಡಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದ ಮನೆಯಲ್ಲಿ ಕಳ್ಳತನ ನಡೆದಿದೆ.  ಅಬ್ದುಲ್ ಮಲಿಕರ "ಬೈತ್ ಅಲ್ ಸಫಾ" ಎಂಬ ಹೆಸರಿನ ನಿವಾಸದಲ್ಲಿ ಕಳ್ಳರು ಕನ್ನ ಹಾಕಿರುವ ಘಟನೆ ನಡೆದಿದೆ.

ಕಳ್ಳತನವಾದ ಮನೆಯ ಮಹಡಿಯಲ್ಲಿ ಅಬ್ದುಲ್ ಮಲಿಕ್ ತಮ್ಮ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದು ಕೆಳಗಿನ ನಿವಾಸವನ್ನು ಬೇರೆ ಕುಟುಂಬಕ್ಕೆ ಬಾಡಿಗೆಯನ್ನು ನೀಡಿರುತ್ತಾರೆ. 
ಮಂಗಳವಾರ ಸಂಜೆ 7:15 ರ ಸಮಯಕ್ಕೆ ಮನೆ ಮಂದಿ ಎಲ್ಲರು ಮನೆಯ ಪಕ್ಕದಲ್ಲಿರುವ ಸಂಬಂದಿಕರ ಮನೆಗೆ ಹೋಗಿ ರಾತ್ರಿ 9:15ಕ್ಕೆ ಬಂದು ನೋಡಿದಾಗ ಕಳ್ಳರು ಮನೆಗೆ ನುಗ್ಗಿರುವುದು ಕಂಡುಬಂದಿದೆ. ಮನೆಯಲ್ಲಿದ್ದ ನಗದು ಮತ್ತು ಬೆಲೆ ಬಾಳುವ ಕೈ ಗಡಿಯಾರವನ್ನು ದೋಚಿ ಪರಾರಿಯಾಗಿದ್ದಾರೆ.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo