ನೆಲ್ಯಾಡಿ (ಉಪ್ಪಿನಂಗಡಿ): ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪ ಎಂಜಿರ ಎಂಬಲ್ಲಿ ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟಿದ್ದಲ್ಲದೆ ಅವನ ಜೊತೆಗಿದ್ದ ಹಿಂಬದಿ ಸವಾರ ಸಹ ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತನು ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಸಿಆರ್‌ಸಿ ಕಾಲೊನಿ ನಿವಾಸಿ ಮನೋಜ್ (20) ಎಂದು ತಿಳಿದುಬಂದಿದೆ. ಮನೋಜ್ ನ ಜೊತೆಗಿದ್ದ ಹಿಂಬದಿ ಸವಾರ
ಅದೇ ಕಾಲೊನಿಯ ಸಚಿನ್ ಎಂದು ತಿಳಿದುಬಂದಿದ್ದು ಆತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಡಾರ್ಕ್ ರೈಡರ್ಸ್ ಎನ್ನುವ ಹೆಸರಿನಲ್ಲಿ ಕುಂಬ್ರದಿಂದ 10 ಬೈಕ್‌ಗಳಲ್ಲಿ 15 ಮಂದಿ ಹಾಸನದ ಹೊಸಹಳ್ಳಿ ಗುಡ್ಡಕ್ಕೆ ಬೈಕ್ ರ‍್ಯಾಲಿ ಹೊರಟಿದ್ದರು. ಈ ಬೈಕ್ ರೈಡ್ ಗೆ ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಚಾಲನೆ ನೀಡಲಾಗಿತ್ತು ಎನ್ನಲಾಗಿದೆ.
ಬೈಕ್ ರ‍್ಯಾಲಿ ಉದ್ಘಾಟನೆಗೆ ಕೆಲವೇ ನಿಮಿಷಗಳು ಬಾಕಿ ಇರುವ ಮುನ್ನವೆ ನಿಲ್ಲಿಸಲಾಗಿದ್ದ ಮೂರು ಬೈಕ್‌ಗಳು ಒಂದರ ಮೇಲೊಂದು ಬಿದ್ದಿದ್ದು ಕಂಡುಬಂದಿದೆ.
ಈ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತಂಡದಲ್ಲಿದ್ದ ಇತರ ಸವಾರರು ತಮ್ಮ ಬೈಕ್‌ಗಳನ್ನು ತಿರುಗಿಸಿ ವಾಪಸ್ ಬರುತಿದ್ದರು. ಆ ಸಂದರ್ಭದಲ್ಲಿ ಚೇತನ್ ಕುಮಾರ್ ಎಂಬುವರ ಬೈಕ್ ಸ್ಕಿಡ್ ಆಗಿದ್ದು ಅವರು ಗಾಯಗೊಂಡಿದ್ದು, ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ