ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷಾ ಬಲಿ, ಸರ್ಪ ಸಂಸ್ಕಾರ ಪೂಜೆಗಳಿಗೆ ಅವಕಾಶ.
ಸುಬ್ರಹ್ಮಣ್ಯ :
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಕಾರದ ಮತ್ತು ಆಡಳಿತ ಮಂಡಳ ನಿರ್ಣಯಿಸಿದ ನಿರ್ಣಯದಂತೆ ಇಂದಿನಿಂದಲೇ ಕೆಲ ಪೂಜಾ ಸೇವೆಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದೆ.
ಸರ್ಕಾರ ಹೊರಡಿಸಿದ ಕೊವಿಡ್ ನಿಯಮಗಳ ಅನುಸಾರವಾಗಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಪೂಜೆ ಪ್ರಾರಂಭವಾಗಲಿದೆ.
ಸರ್ಪ ಸಂಸ್ಕಾರ ಪೂಜೆ ದಿನವೊಂದಕ್ಕೆ ನೂರು ಪೂಜೆಗಳು ಮಾತ್ರ ನೆರವೇರಲಿದೆ. ಪ್ರತಿ ಪೂಜೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿದ್ದು ಸೇವಾಕರ್ತೃಗಳು ಕಡ್ಡಾಯವಾಗಿ ಕೊವೀಡ್ ಲಸಿಕೆಯನ್ನು ತೆಗೆದುಕೊಂಡಿರಬೇಕು. ಮತ್ತು ಆರ್ ಟಿಸಿಪಿಆರ್ ಪರೀಕ್ಷೆಯ ವರದಿ ಇರಬೇಕಾಗುತ್ತದೆ.
ಆಶ್ಲೇಷಾ ಬಲಿ ಪೂಜೆ 4 ಪಾಳಿಯಲ್ಲಿ ಇರಲಿದ್ದು ಬೆಳಿಗ್ಗೆ 3 ಮತ್ತು ಸಂಜೆ 1 ಸಲ ನಡೆಯಲಿದೆ. ಪ್ರತಿ ಸಲವೂ 70 ಪೂಜೆಗೆ ಮಾತ್ರ ಅವಕಾಶಗಳು ಇರಲಿದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.
ನಾಗ ಪ್ರತಿಷ್ಠೆ ದಿನವೊಂದಕ್ಕೆ 25 ಪೂಜೆ ಮಾತ್ರ ಜರುಗಲಿದ್ದು ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊಳ್ಳುವುದರೊಂದಿಗೆ ಸರ್ಕಾರದ ನಿಯಮಾನುಸಾರ ಕೊವೀಡ್ 19 ನಿಯಮವನ್ನು ಪಾಲಿಸಬೇಕೆಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ