Slider

ಉಡುಪಿ:ರಾತ್ರಿಯಿಡೀ ನೀರಿನಲ್ಲಿ ಬಿದ್ದು ಅಪರಿಚಿತ ವ್ಯಕ್ತಿ ಒದ್ದಾಟ

ಉಡುಪಿ:ರಾತ್ರಿಯಿಡೀ ನೀರಿನಲ್ಲಿ ಬಿದ್ದು ಅಪರಿಚಿತ ವ್ಯಕ್ತಿ ಒದ್ದಾಟ
ಉಡುಪಿಯ ಪೆರಂಪಳ್ಳಿ ಎಂಬಲ್ಲಿ ರಾತ್ರಿಯಿಡೀ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡ ಡೆನಿಸ್ ಮಸ್ಕರೇನಸ್ ಪೆರಂಪಳ್ಳಿಯವರು ಕೆವೈಸಿ ತಂಡಕ್ಕೆ ಕರೆಮಾಡಿ ತಿಳಿಸಿದರು.ಸಾರ್ವಜನಿಕರ ಸಹಾಯದಿಂದ ಅವರನ್ನು ನೀರಿನಿಂದ ಮೇಲಕ್ಕೆತ್ತಿ, ಶುದ್ಧ ನೀರಿನಿಂದ ಸ್ನಾನ ಮಾಡಿಸಿ ಬಟ್ಟೆ ಬದಲಿಸಿ ಸ್ವಚ್ಛಗೊಳಿಸಿದ ನಂತರ ಹಸಿವಿನಿಂದ ಬಳಲುತ್ತಿದ್ದ ಅವರಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಲಾಯಿತು

ರಿಲಯನ್ಸ್ ಉಡುಪಿ ಘಟಕದಲ್ಲಿ ಉದ್ಯೋಗಾವಕಾಶ: ಆಕರ್ಷಕ ವೇತನ ಇಂದೇ ಅಪ್ಲೈ ಮಾಡಿ
ರಾತ್ರಿಯಿಡೀ ನೀರಿನಲ್ಲಿ ಇದ್ದ ಕಾರಣ ಚಳಿಯಿಂದ ದೇಹದ ಉಷ್ಣತೆಯನ್ನು ಕಳೆದುಕೊಂಡು ಮಾತನಾಡದ ಸ್ಥಿತಿಯಲ್ಲಿ ಇದ್ದುದರಿಂದ ತಕ್ಷಣವೇ ಹೊಸಬೆಳಕು ಆಶ್ರಮಕ್ಕೆ ಕರೆ ಮಾಡಿದಾಗ ತಕ್ಷಣವೇ ಆ ಜಾಗಕ್ಕೆ ಹುಮ್ಯಾನಿಟಿ ಸಂಸ್ಥೆಯವರು ದೇಣಿಗೆಯಾಗಿ ನೀಡಿದ್ದ ಆಂಬುಲೆನ್ಸ್ ನಲ್ಲಿ ಪ್ರಥಮ ಬಾರಿಯ ಸೇವೆಯ ರೂಪದಲ್ಲಿ ಬಂದು ಸಹಕರಿಸಿದರು.
ಆನಂತರ ಅಪರಿಚಿತ ವ್ಯಕ್ತಿಯನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ಮಾತನಾಡಲು ಶುರು ಮಾಡಿದಾಗ ಆ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದು ಕೊಂಡಾಗ ಆ ವ್ಯಕ್ತಿಯು ಕಾರ್ಕಳದ ಕೌಡೂರು ನವರೆಂದು ತಿಳಿದು ಬಂದು ಅವರ
ಮನೆಯವರಿಗೆ ಮಾಹಿತಿಯನ್ನು ಕಳುಹಿಸಲಾಯಿತು. ಕೆವೈಸಿ ಯ ಮಾಹಿತಿಯನ್ನು ಪಡೆದು ಅಪರಿಚಿತ ವ್ಯಕ್ತಿಯ ಸಹೋದರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆ ವ್ಯಕ್ತಿಯನ್ನು ಸಂಪರ್ಕಿಸಿದರು.


ಇದನ್ನು ಓದಿ


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo