Slider


ಕುಂದಾಪುರ : ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸಿ ಎ. ಬಿ .ವಿ ‌ಪಿ ವಿಧ್ಯಾರ್ಥಿಗಳಿಂದ ಪ್ರತಿಭಟನೆ

ಕುಂದಾಪುರ : ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸಿ ಎ. ಬಿ .ವಿ ‌ಪಿ ವಿಧ್ಯಾರ್ಥಿಗಳಿಂದ ಪ್ರತಿಭಟನೆ
ಉಡುಪಿ : ಎಳೆ ವಯಸ್ಸಿನ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನ ಮಹಿಳೆಯವರೆಗೂ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಅತ್ಯಾಚಾರಗೈದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಮಂಗಳೂರು ವಿಧ್ಯಾರ್ಥಿಗಳ ನೇತೃತ್ವದಲ್ಲಿ ಕುಂದಾಪುರದಲ್ಲಿ ಪ್ರತಿಭಟನೆ ನಡೆಯಿತು.

ಅಖಿಲಾ.ಭಾರತ.ವಿಧ್ಯಾರ್ಥಿ.ಪರಿಷತ್ ಉಡುಪಿ ಜಿಲ್ಲೆ ಇದರ ಜಿಲ್ಲಾ ಸಂಚಾಲಕ್ ಆಗಿರುವ ಅಶೀಶ್ ಶೆಟ್ಟಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ವೀರ ವನಿತೆಯರನ್ನು ಹೊಂದಿರುವ ಈ ನಾಡಿನಲ್ಲಿ ಹೆಣ್ಣಿಗೆ ಪೂಜನೀಯವಾದ ಸ್ಥಾನ ನೀಡಿದೆ. ನೆಲ, ಜಲ, ದೇಶ ಎಲ್ಲದ್ದಕ್ಕೂ ಹೆಣ್ಣಿನ ಸ್ಥಾನ ನೀಡಿರುವ ಪರಂಪರೆ ನಮ್ಮದು. ಆದರೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಮನುಷ್ಯತ್ವವನ್ನು ಮೀರಿದವುಗಳಾಗಿವೆ. ಅತ್ಯಾಚಾರಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮತ್ತೆ ಇಂಥಹ ಕೃತ್ಯಗಳು ನಡೆಯದಂತೆ ಕಾನೂನಿನ ಭಯ ಮೂಡಿಸುವ ಕಾರ್ಯ ಆಗಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ನಿರಕ್ಷಿತ, ಪ್ರಸನ್ನ, ತಾಲುಕು.ಸಂಚಾಲಕ ಪ್ರಜ್ವಲ್, ಆಶಿಶ್ ಬೋಳ, ವಿಜೇತ್, ಯಶಸ್ವಿನಿ ಬೀಜಾಡಿ, ದೀಪಕ್, ರಶ್ಮಿತಾ, ರಾಹುಲ್, ರಶ್ಮಿತಾ, ಹೃತಿಕ್, ಪಲ್ಲವಿ, ಸಂಜಯ್, ಮೇಘ ಮೊದಲಾದವರು ಭಾಗವಹಿಸಿದ್ದರು. ತಾಲೂಕಿನ ಐದು ಶಿಕ್ಷಣ ಸಂಸ್ಥೆಗಳ ಎಬಿವಿಪಿ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಈ ಕುರಿತು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo