ಉಡುಪಿ:ಗೋ ಕಳ್ಳತನ ವಿರುದ್ದ ನಡೆಯುತ್ತಿರುವ ಜಾಗೃತಿ ಸಭೆ ಸಂದರ್ಭದಲ್ಲೇ ಗೋವು ಅಕ್ರಮ ಸಾಗಾಟ ನಡೆದ ಘಟನೆ ನಡೆದಿದ್ದು ಗೋ ಕಳ್ಳರು ತಾವು ಚಲಿಸುತ್ತಿದ್ದ ಮಾರುತಿ 800 ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದೆ..
ಈ ಸಂದರ್ಭದಲ್ಲಿ ಘಟನೆ ನಡೆದ
ತಕ್ಷಣವೇ ಸಂಘಟನೆಯ ಕಾರ್ಯಕರ್ತರು ಕಳ್ಳರನ್ನು ಹಿಂಬಾಲಿಸಿದರು ಕೂಡ ಕಳ್ಳರ ಸುಳಿವು ಕೊಂಚವು ಸಿಗದೆ ಇರದ ಕಾರಣ ಆಕ್ರೋಶಗೊಂಡಿದ್ದಾರೆ.
ಅಕ್ರಮವಾಗಿ ಗೋ ಕಳ್ಳತನ ಮಾಡಿದ ಅದನ್ನು ಕಸಾಯಿಖಾನೆಗೆ ಸಾಗಿಸುತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು ಇಂದು ಬೆಳಿಗ್ಗೆ ಬಜರಂಗದಳ ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಜಿಲ್ಲೆಯ ಪೋಲಿಸ್ ಠಾಣೆಯ ಮುಂದೆ ಗೋ ಕಳ್ಳರನ್ನು ನೀವು ಬೆಳಿಗ್ಗೆ 10:00 ಯ ಒಳಗೆ ಹಿಡಿಯದೆ ಇದ್ದಲ್ಲಿ ಬಜರಂಗದಳ ದ ವತಿಯಿಂದ ಪ್ರಖಂಡ ವಿಶ್ವ ಹಿಂದೂ ಪರಿಷತ್ ಕಾರ್ಕಳ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ