ಉಡುಪಿ:ಗೋ ಕಳ್ಳತನ ವಿರುದ್ದ ನಡೆಯುತ್ತಿರುವ ಜಾಗೃತಿ ಸಭೆ ಸಂದರ್ಭದಲ್ಲೇ ಗೋವು ಅಕ್ರಮ ಸಾಗಾಟ ನಡೆದ ಘಟನೆ ನಡೆದಿದ್ದು, ಹಿಂದೂ ಸಂಘಟನೆಗಳ ಕೈಗೆ ಸಿಕ್ಕಿ ಬೀಳುವ ಹೆದರಿಕೆಯಿಂದ ಕಳ್ಳರು ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾರೆ.
ಈ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ನಡೆದಿದ್ದು. ಮಾರುತಿ-800 ಕಾರಿನಲ್ಲಿ ಗೋವು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಕಾರು ಅಡ್ಡಗಟ್ಟಿದ ಸಂದರ್ಭದಲ್ಲಿ ಈ ಕುರಿತು ನಿಜಾಂಶ ಬೆಳಕಿಗೆ ಬಂದಿದೆ.
ಶಿರ್ಲಾಲಿನಲ್ಲಿ ನಿನ್ನೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸರಣಿ ಗೋಕಳ್ಳತನದ ವಿರುದ್ಧ ಪ್ರತಿಭಟನೆ ಮುಗಿಸಿ ಮನೆಗೆ ಮರಳುವಾಗ ಮಾರುತಿ 800 ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವ ಮಾಹಿತಿ ದೊರಕಿತ್ತು. ಈ ಸಂದರ್ಭದಲ್ಲಿ
ತಕ್ಷಣವೇ ಸಂಘಟನೆಯ ಕಾರ್ಯಕರ್ತರು ಕಳ್ಳರನ್ನು ಹಿಂಬಾಲಿಸಿದರು.
ಕಾರು ಕೆರ್ವಾಶೆಯ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.
ಅಲ್ಲದೆ ಚಲಿಸುತ್ತಿದ್ದ ಕಾರು ಮಸೀದಿ ಬಳಿ ತೆರಳುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದವರು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಂಘಟನೆಯ ಕಾರ್ಯಕರ್ತರು ದೌಡಾಯಿಸಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ