ಉದಯ್ ಬಂಧಿತ ಆರೋಪಿಯಾಗಿದ್ದು, ಯುವತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕುತ್ತಿಗೆ ಹಾಗೂ ತೊಡೆ ಭಾಗ ಬಲವಾಗಿ ಇರಿದು ಕೊಲೆ ಮಾಡಲು ಯತ್ನಿಸಿದ್ದ. ತನ್ನದೇ ಕಾಲೇಜಿನ ಸೀನಿಯರ್ ಯುವತಿಯನ್ನ ಲವ್ ಮಾಡ್ತಿದ್ದ ಉದಯ್, 2018 ರಿಂದ ಯುವತಿ ಹಿಂದೆ ಲವ್ ಮಾಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. 2018 ರಲ್ಲಿ ಮೊದಲ ಬಾರಿಗೆ ಕಾಲೇಜಿನಲ್ಲಿ ಯುವತಿಗೆ ಲವ್ ಪ್ರಪೊಸ್ ಮಾಡಿದ್ದ ಎನ್ನಲಾಗಿದ್ದು, ಈ ವೇಳೆ ಹಲ್ಲೆಗೊಳಗಾದ ಯುವತಿ ಸ್ನೇಹಿತರಾಗಿ ಇರೋಣ ಎಂದಿದ್ದಳಂತೆ.
ಇದಕ್ಕೆ ಒಪ್ಪದ ಆರೋಪಿ ಯುವತಿಗೆ ಪೀಡಿಸಲು ಆರಂಭಿಸಿದ್ದಾನೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಯುವತಿ ಕುಟುಂಬಸ್ಥರು ಉದಯ್ ಗೆ ವಾರ್ನ್ ಮಾಡಿದ್ರು ಜಗ್ಗದ ಆರೋಪಿ, ಪ್ರೀತಿ ಮಾಡುವಂತೆ ಯುವತಿಯ ಬರ್ತ್ಡೇ ದಿನ ಮತ್ತೆ ಒತ್ತಾಯಿಸಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಬೇಸತ್ತ ಯುವತಿ ಪಾಲಕರು ಯುವತಿಯ ಸಿಮ್ ಕಾರ್ಡ್ ಚೇಂಜ್ ಮಾಡಿ ಬೇರೆ ಕಾಲೇಜಿಗೂ ಸೇರಿಸಿದ್ದರಂತೆ.
ಇದಾದ ಬಳಿಕ ನನ್ನ ಪ್ರೀತಿ ಒಪ್ಪದಿದ್ದರೆ ಒಂದು ವರ್ಷದೊಳಗಾಗಿ ನಿನ್ನನ್ನ ಸಾಯಿಸುತ್ತೇನೆ ಎಂದು ಆವಾಜ್ ಹಾಕಿದ್ದ ಎನ್ನಲಾಗಿದ್ದು, ಅದರಂತೆ ಕಳೆದ ಆಗಸ್ಟ್ 25 ರಂದು ಯುವತಿಗೆ ಚಾಕುವಿನಿಂದ ಇರಿದಿದ್ದಲ್ಲದೆ, ಯುವತಿ ಮೈಮೇಲೆ ಪೆಟ್ರೊಲ್ ಸುರಿದು ಸುಡಲು ಯತ್ನಿಸಿದ್ದ. ಈ ವೇಳೆ ಸ್ಥಳೀಯರು ಧಾವಿಸಿದ ಪರಿಣಾಮ ಆರೋಪಿ ಎಸ್ಕೇಪ್ ಆಗಿ ತಲೆ ಮರೆಸಿಕೊಂಡಿದ್ದ. ಸದ್ಯ ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗೆ ಬಲೆ ಬೀಸಿದ ಪೊಲೀಸರು ವಿಕೃತ ಪ್ರೇಮಿಯನ್ನು ಬಂಧಿಸಿ ಕಂಬಿಯ ಹಿಂದೆ ನಿಲ್ಲಿಸಿದ್ದಾರೆ.

ವರದಿ: Team Inspiring You
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ