Slider


ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಉಡುಪಿ ಜಿಲ್ಲಾ ಪ್ರವಾಸ..ರೂಟ್‌ಮ್ಯಾಪ್ ಹೀಗಿದೆ

ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಉಡುಪಿ ಜಿಲ್ಲಾ ಪ್ರವಾಸ ದಲ್ಲಿದ್ದಾರೆ
 ಇಂದು ಬೆಳಗ್ಗೆ 9ರಿಂದ 9:30ರವರೆಗೆ ಆನೆಗುಂಡಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಭೇಟಿ, 9:45ರಿಂದ 10ರವರೆಗೆ ಉಡುಪಿ ನಗರ ಬಿಜೆಪಿ ಕಾರ್ಯಕ್ರಮ, 10:30ರಿಂದ 11ರ ವರೆಗೆ ಕೋಟದ ಮಾಂಗಲ್ಯ ಸಭಾ ಭವನದಲ್ಲಿ ನಡೆಯುವ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ, 11:00 ರಿಂದ ಅಪರಾಹ್ನ 12:35ರವರೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂತರ್ಜಾಲದ ಮುಖಾಂತರ ನಡೆಯುವ ಅಂತಾರಾಷ್ಟ್ರೀಯ ಸಿರಿ ಧಾನ್ಯ ಉತ್ಸವದ ಉದ್ಘಾಟನಾ ಕಾರ್ಯಕ್ರಮ, 12:45ಕ್ಕೆ ಉಪ್ಪೂರಿನಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಕಾರ್ಯಕ್ರಮ, 1:30ಕ್ಕೆ ಕಾರ್ಕಳ ಬಿಜೆಪಿ ಕಚೇರಿಗೆ ಭೇಟಿ, 2:00 ಗಂಟೆಗೆ ಕಾರ್ಕಳದ ಬಾಹುಬಲಿ ಸಭಾಭವನದಲ್ಲಿ ರೈತರೊಂದಿಗೆ ಸಂವಾದ, 3:15ಕ್ಕೆ ಕಾರ್ಕಳದ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ಹಾಗೂ ಸಂಜೆ 4:30ಕ್ಕೆ ಪೆರ್ಡೂರು ಮಹಾಶಕ್ತಿ ಕೇಂದ್ರಕ್ಕೆ ಭೇಟಿ ನೀಡುವರು ಎಂದು ಪ್ರಕಟಣೆ ತಿಳಿಸಿದೆ.


ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo