ಕರಾವಳಿಯಲ್ಲಿ ಈಗಾಗಲೇ ಆರಂಭಗೊಂಡಿದ್ದ ಮುಂಗಾರು ಮಳೆ ಇನ್ನು ಮುಂದುವರೆದಿದ್ದು, ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಸೆಪ್ಟೆಂಬರ್ 11 ರವರೆಗೆ ಮಂದುವರೆಯಲಿದೆ ಎಂದು ಹವಮಾನ ಇಲಾಖೆ ಸ್ಪಷ್ಟಪಡಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಲಾಖೆಯ ಪ್ರಕಾರ ಸೆಪ್ಟೆಂಬರ್ 11ರವರೆಗೆ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬಿದ್ದ ಮಳೆಯನುಸಾರ ಉಡುಪಿ ಜಿಲ್ಲೆಯ ಕೊಲ್ಲೂರು ಭಾಗದಲ್ಲಿ 9 ಮಿ.ಮೀ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ರಿಂದ 5 ಮಿ.ಮೀ. ಮಳೆಯಾಗಲಿದೆ.
ಬುಧವಾರದಿಂದ ಗುರುವಾರ ಬೆಳಗ್ಗೆವರೆಗೆ ಜಿಲ್ಲೆಯಲ್ಲಿ 18.6 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 31 ಮಿ.ಮೀ, ಬಂಟ್ವಾಳ 11.4 ಮಿ.ಮೀ, ಮಂಗಳೂರು 14.4 ಮಿ.ಮೀ, ಪುತ್ತೂರು 13.6 ಮಿ.ಮೀ, ಸುಳ್ಯದಲ್ಲಿ 9.4 ಮಿ.ಮೀ, ಮೂಡುಬಿದಿರೆ 21.2 ಮಿ.ಮೀ, ಕಡಬದಲ್ಲಿ 16.9 ಮಿ.ಮೀ ಮಳೆಯಾಗಿದೆ ಎಂಬ ವರದಿ ಲಭ್ಯವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 39.7ಮಿ. ಮೀ. ಮಳೆ ದಾಖಲಾಗಿದೆ. ಉಡುಪಿ: 41.3 ಮಿ.ಮೀ., ಬ್ರಹ್ಮಾವರ: 37.9 ಮಿ. ಮೀ., ಕಾಪು: 24.5 ಮಿ.ಮೀ., ಕುಂದಾಪುರ: 36.3 ಮಿ.ಮೀ., ಬೈಂದೂರು: 30.2 ಮಿ. ಮೀ., ಕಾರ್ಕಳ: 31.5 ಮಿ.ಮೀ., ಹೆಬ್ರಿ: 79.8 ಮಿ. ಮೀ. ಮಳೆ ಸಂಭವಿಸಿದೆ.
ವರದಿ:-UDUPI FIRST
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ