Slider

ಆಯತಪ್ಪಿ ನದಿಗೆ ಜಾರಿ ಬಿದ್ದು ತಾಯಿ-ಮಗು ಮೃತ್ಯುಬೈಂದೂರಿನಲ್ಲಿ ದಾರುಣ ಘಟನೆ

ಬೈಂದೂರು:- ನದಿಗೆ ಬಿದ್ದು ತಾಯಿ ಮಗ ಇಬ್ಬರೂ ಸಾವನ್ನಪ್ಪಿರುವ ಧಾರುಣ ಘಟನೆ ಬೈಂದೂರು ತಾಲ್ಲೂಕು ನಾವುಂದದಲ್ಲಿ ನಡೆದಿದೆ.

ತಾಯಿ-ಮಗು ಇಬ್ಬರೂ ನದಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಗು ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಮಗುವನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರುಪಾಲಾಗಿದ್ದಾರೆ. 


ಮೃತರನ್ನು ನಾವುಂದದ ನೋಯಲ್, ಚುಂಗಿಗುಡ್ಡೆ ನಿವಾಸಿ ಶಾನ್ 11 ರೊಸಾರಿಯಾ 35 ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಶಾನ್ ಮೃತದೇಹ ಪತ್ತೆಯಾಗಿದ್ದು, ಬಳಿಕ ಅಗ್ನಿಶಾಮಕ ಸಿಬ್ಬಂದಿ ಮಹಿಳೆಯ ಮೃತದೇಹವನ್ನು ಪತ್ತೆ ಮಾಡಿದ್ದಾರೆ. 


ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ:-UDUPI FIRST


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo