Slider

ಸಚಿವ ಸುನೀಲ್ ಕುಮಾರ್ ಉಡುಪಿ ಜಿಲ್ಲೆಯಾದ್ಯಂತ ಎರಡು ದಿನ ಪ್ರವಾಸ

ಸಚಿವ ಸುನೀಲ್ ಕುಮಾರ್ ಉಡುಪಿ ಜಿಲ್ಲೆಯಾದ್ಯಂತ ಎರಡು ದಿನ  ಪ್ರವಾಸ
                                                                 ಉಡುಪಿ, ಸೆ.5: ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಸೆ.5 ಮತ್ತು 6ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು ಎಷ್ಟು ಗಂಟೆಗೆ ಸರಿಯಾಗಿ ಯಾವ ಸ್ಥಳಕ್ಕೆ ಭೇಟಿ ನೀಡುವರು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದು ಬೆಳಗ್ಗೆ 9 ಗಂಟೆಗೆ  ಸರಿಯಾಗಿ ಸಾಣೂರುನಲ್ಲಿ ಮೆಸ್ಕಾಂ ಮಾದರಿ ಗ್ರಾಮ ಉದ್ಘಾಟನೆ, 10 ಗಂಟೆಗೆ ಉಡುಪಿ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ತೆರಳುವ ಸಚಿವರು ತದನಂತರ 11:30ಕ್ಕೆ ಕಾರ್ಕಳ ತಾಲುಕು ಪಂಚಾಯತ್ನಲ್ಲಿ ತಾಲೂಕು ಮಟ್ಟದ ಅಧಿಕಾರಿ ಗಳೊಂದಿಗೆ ಸಭೆ ನಡೆಸಲಿದ್ದಾರೆ, ಅಪರಾಹ್ನ 1:00ಕ್ಕೆ ಹಿರಿಯಂಗಡಿ ಬಾಲಾಜಿ ಅಯ್ಯಪ್ಪ ಶಿಬಿರಕ್ಕೆ ಭೇಟಿ ನೀಡಿ  2:30ಕ್ಕೆ ಕಾರ್ಕಳದ ಅಂಡಾರು ವಿಠಲ ಶೆಟ್ಟಿ ರುಕ್ಮಿಣಿ ಕಿಣಿ ಸಭಾ ಭವನ ದಲ್ಲಿ ನಡೆಯುವ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಬಳಿಕ, 3:45ರಿಂದ  ಸಂಜೆ 5:00ರವರೆಗೆ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಕಳ ಮತ್ತು ಹೆಬ್ರಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಇದಿಷ್ಟು ಅವರು ಇಂದಿನ ಕಾರ್ಯಕ್ರಮವಾಗಿರುತ್ತದೆ. 
    ಮಾರನೇಯ ದಿನ ಸೆಪ್ಟೆಂಬರ್ 6 ರಂದು ಮುಂಜಾನೆ 7:೦೦ ಗೆ ಸರಿಯಾಗಿ ಕೊಲ್ಲೂರು ಮೂಕಾಂಬಿಕ ದೇಗುಲಕ್ಕೆ ಭೇಟಿ, ಬಳಿಕ 9:00 ಗೆ ಸರಿಯಾಗಿ ಬೈಂದೂರು ಗೋಳಿಹೊಳೆ ಪಂಚಾಯತ್ ವ್ಯಾಪ್ತಿಯ ಯಳಜಿತ್ ಗ್ರಾಮದ ಬೂತ್ ಅಧ್ಯಕ್ಷರ ನಿವಾಸದಲ್ಲಿ ನಾಮಫಲಕ ಅಳವಡಿಕೆ. 9:30-10:30ಗೆ ಸರಿಯಾಗಿ ಬೈಂದೂರು ಬಿ.ಜೆ.ಪಿ ಕಛೇರಿಗೆ ಭೇಟಿ. ತಂದ ಬಳಿಕ ಅಪರಾಹ್ನ 12:30-1:30 ಯವರೆಗೆ ಕಾರ್ಕಳ ವಿಕಾಸ ಕಛೇರಿಯಲ್ಲಿ  ನಡೆಯಲಿರುವ ಬಿಳಿ ಬೆಂಡೆ ಮೇಳದಲ್ಲಿ ಭಾಗವಹಿಸಿ  ಬಳಿಕ ಮಂಗಳೂರಿನತ್ತ ಪ್ರಯಾಣ ಬೆಳೆಸಿರುವ ಸಚಿವ ಸುನೀಲ್ ಕುಮಾರ್.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo