Slider


ಉಡುಪಿ:-ಮಲಿನವಾದ ಇಂದ್ರಾಣಿ ನದಿ ನೀರು ಶುದ್ಧೀಕರಣಕ್ಕೆ ಮನವಿ

ಉಡುಪಿ: ಉಡುಪಿ ಜಿಲ್ಲೆಯ ಹೆಸರಾಂತ ನದಿಗಳಲ್ಲಿ ಒಂದಾದ ಇಂದ್ರಾಣಿ ನದಿಯು ಹಲವು ವರ್ಷಗಳಿಂದ ತ್ಯಾಜ್ಯಗಳು ಜೊತೆ ಸೇರಿ ಮಲೀನವಾಗುತ್ತಿರಕವ ನಿಟ್ಟಿನಲ್ಲಿ  ಧಾರ್ಮಿಕ ಶೃದ್ಧಾ ಕೇಂದ್ರದ ಕೆರೆಗಳು, ಬಾವಿಗಳು, ಅದಲ್ಲದೆ ಸ್ಥಳಿಯರ 450 ಕ್ಕೂ ಅಧಿಕ ಮನೆಗಳ ನೀರು ಸಹ ಮನಿಲಗೊಂಡಿದೆ. ಈ ಸಂದರ್ಭದಲ್ಲಿ ಕುಡಿಯಲು ಸಹ ಇದೆ ನೀರನ್ನು ಉಪಯೋಗಿಸುವುದರಿಂದ ಜನರ ಆರೋಗ್ಯ ಹದಗೆಟ್ಟು ಹೋಗಿರುವೂದು ಕಂಡುಬಂದಿದೆ.
            ವರ್ಷಗಳ ಹಿಂದೆ ಸರ್ಕಾರ ಕೃಷಿ ಪ್ರಧಾನ ವಾದ ಈ ಪ್ರದೇಶದಲ್ಲಿ 8-9 ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿಕೊಟ್ಟು ವರ್ಷದಲ್ಲಿ ಬೆಳೆಯೂವ ಮೂರು ಬೆಳೆಯನ್ನು ಉತ್ಪಾದನೆ ಮಾಡಬೇಕು ಎಂದು ಆದೇಶ ಹೊರಡಿಸಿದೆ.  ಆದರೆ ಈಗ ಈ ನದಿಯು ಸಂಪೂರ್ಣವಾಗಿ ಮಲಿನಗೊಂಡು ಯಾವುದಕ್ಕೂ ಉಪಯೋಗವಿಲ್ಲದೆ ದುರ್ವಾಸನೆ ಬೀರುತ್ತಿದೆ.  ಭಾರತ ದೇಶದಲ್ಲಿ ಉಡುಪಿ ಜಿಲ್ಲೆ ಕೃಷಿ ಪ್ರಧಾನವಾಗಬೇಕದರೆ ಇಂದ್ರಾಣಿ ನದಿ ಶುದ್ದಿಯಾಗಬೇಕು. 
   ಈ ನದಿ ನೀರು ಶುದ್ದಿಯಾಗದೆ ಇದ್ದಲ್ಲಿ ಜನರು ಈ ನದಿಯು ಕಲುಷಿತ ನೀರನ್ನು ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಪರಿಸ್ಥಿತಿ ಎದೂರಾಗಿದೆ. ಇವಾಗಲೆ ಕೊಡವೂರು ವಾರ್ಡ್ ನಲ್ಲಿ  25-30 ಜನರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಇದಲ್ಲದೆ ಮತ್ತಿತರರಿಗೆ  ಟಿ.ಬಿ, ಚರ್ಮದ ಕಾಯಿಲೆಯು ಸಹ ಉಲ್ಬಣಿಸಿದೆ. 
ಈ ಸಮಸ್ಯೆಯನ್ನು ಮನಗಂಡ  ನಗರಸಭಾ ಸದಸ್ಯರಾದ ವಿಜಯ್ ಕೊಡವೂರು  ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದ್ದಾರೆ ನೀವು ದೇಶದಲ್ಲಿ ಕೃಷಿಗೆ ಒತ್ತನ್ನು ನೀಡುವ ಮಂತ್ರಿಯಾಗಿದ್ದೀರಿ. ನಮ್ಮ ಈ ಪ್ರದೇಶ ಕೃಷಿ ಪ್ರಧಾನವಾಗಬೇಕಾದರೆ  ಇಂದ್ರಾಣಿ ನದಿ ಶುದ್ದಿಕರಿಸಿ ಮತ್ತು  ಇದಕ್ಕೋಸ್ಕರ ಯೋಜನೆಯನ್ನು ರೂಪಿಸಬೇಕು ಎಂದು ಮನವಿಯನ್ನು ಸಲ್ಲಿಸಾದ್ದಾರೆ.

ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo