Slider

ಮಂಗಳೂರು ವಿ.ವಿ: 6ನೇ ಸೆಮಿಸ್ಟರ್ ಪರೀಕ್ಷೆ ದಿನಾಂಕ ಪ್ರಕಟ.



ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನು ಆಫ್ ಲೈನ್ ಮೂಲಕ ಸೆಪ್ಟೆಂಬರ್. 30 ರಂದು ನಡೆಸಲು ಸೋಮವಾರ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.


ಇನ್ನು ಎರಡು ದಿನದ ಒಳಗೆ ಈ ಕುರಿತ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದೆ.  ಈ ಮುಂಚೆ ನಡೆದ 1, 3, 5 ನೇ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನವನ್ನು ಕೂಡಾ ಶೀಘ್ರ ಮುಗಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

6ನೇ ಸೆಮಿಸ್ಟರ್ ಪರೀಕ್ಷೆ ಇನ್ನೂ ನಡೆಯದಿರುವ ಕಾರಣ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಕೋರ್ಸುಗಳಿಗೆ ಸೇರ್ಪಡೆಯಾಗಲು ಅಲ್ಲಿ ಆರನೇ ಸೆಮಿಸ್ಟರ್ ಅಂಕಪಟ್ಟಿ ಕೇಳುತ್ತಿರುವುದು ವಿದ್ಯಾರ್ಥಿಗಳಿಗೆ ದಾರಿ ತೋಚದಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆರನೇ ಸೆಮಿಸ್ಟರ್ ನಲ್ಲಿ ಹಾಕಿರುವ ತರಗತಿಗಳನ್ನು ಶೀಘ್ರ ಪೂರ್ಣಗೊಳಿಸಿ ಪರೀಕ್ಷೆ ನಡೆಸಲು ವಿ.ವಿ ತೀರ್ಮಾನಿಸಿದೆ. ಸೆಪ್ಟೆಂಬರ್ ಕೊನೆಯಲ್ಲಿ ಪರೀಕ್ಷೆ ಆರಂಭವಾದರೆ 10 ದಿನದೊಳಗೆ ಪೂರ್ಣಗೊಳಿಸಿ 15 ದಿನದೊಳಗೆ ಮೌಲ್ಯಮಾಪನ ಮುಗಿಸಿ ಅಕ್ಟೋಬರ್ ಮಧ್ಯದಲ್ಲಿ ಫಲಿತಾಂಶ ಪ್ರಕಟಿಸಬಹುದು ಎಂದು ವಿ.ವಿಯ ಚಿಂತನೆಯಾಗಿದೆ.

ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo