Slider

ಬಾಕುಾ೯ರು:ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾಹಿತಿ ಕಾರ್ಯಾಗಾರ ಉದ್ಘಾಟನೆ.

ಬಾಕುಾ೯ರು:ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾಹಿತಿ  ಕಾರ್ಯಾಗಾರ ಉದ್ಘಾಟನೆ.
ಉಡುಪಿ :"ಬದಲಾಗುತ್ತಿರುವ ಜಾಗತಿಕ ಆಥಿ೯ಕ ಶೆೈಕ್ಷಣಿಕ ರಂಗದಲ್ಲಿ ನಮ್ಮ ವಿದ್ಯಾರ್ಥಿಗಳು ಸ್ಪಧಾ೯ತ್ಮಕವಾಗಿ ಎದುರಿಸಿ ನಿಲ್ಲಬೇಕಾದರೆ ಅದಕ್ಕೆ ಪೂರಕವಾದ ಶಿಕ್ಷಣ ನೀಡ ಬೇಕಾದ ಅನಿವಾರ್ಯತೆ ಇದೆ.ಈ ದಿಕ್ಕಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹೆಚ್ಚು ಅಥ೯ ಪುಾಣ೯ವಾಗಿ ಸುದೃಢವಾಗಿ ಹೊರ ಹೊಮ್ಮಿದೆ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ಹೆಚ್ಚು ಒತ್ತು ನೀಡುವ ಶಿಕ್ಷಣ ನೀತಿ ಇದಾಗಿದ್ದು ವಿದ್ಯಾರ್ಥಿ ಸ್ನೇಹಿ ನೀತಿ ಅನ್ನಿಸಿಕೆುಾಂಡಿದೆ.ಗಳಿಸುವ ಜ್ಞಾನಕ್ಕೂ ಬದುಕಿನ ಉದ್ಯೋಗಕ್ಕೂ ನೇರ ಸಂಬಂಧ ಕಲ್ಪಿಸಿರುವುದು ಈ ನೀತಿಯ ವಿಶೇಷತೆ.ಸರ್ಕಾರ ಇದಾಗಲೇ ರಾಷ್ಟ್ರೀಯ ಉತ್ಪನ್ನದ ಶೇ.6 ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಲು ಮುಂದಾಗಿದ್ದು ಭಾರತದ ಶೆೈಕ್ಷಣಿಕ ಕ್ಷೇತ್ರದಲ್ಲಿಯೇ ಇದೊಂದು ಕ್ರಾಂತಿಕಾರಿ ನಿಧಾ೯ರವಾಗಿದ್ದು ಇದನ್ನು ಯಶಸ್ವಿ ಗೊಳಿಸುವಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರು ವಿದ್ಯಾರ್ಥಿಗಳು ಪೇೂಷಕರು ಹೆಚ್ಚು ಆಸಕ್ತಿವಹಿಸಿ ಪಾಲುಗೊಳ್ಳ ಬೇಕಾದ ಅನಿವಾರ್ಯ"ಎಂದು ಅಂಕಣಕಾರ ನಿವೃತ್ತರಾಜ್ಯ ಶಾಸ್ತ್ರ  ಪ್ರಾಧ್ಯಾಪಕ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.ಅವರು ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಕೇೂಶದ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮಾಹಿತಿ ಕಾಯಾ೯ಗಾರ ಉದ್ಘಾಟನೆ ಮಾಡಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ವಿಶೇಷ  ಉಪನ್ಯಾಸ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಶ್ರೀನಿವಾಸ ಶೆಟ್ಟಿ ವಹಿಸಿದ್ದರು.ಡಾ.ರಾಜಕುಮಾರ್   ಕಾಲೇಜಿನ ಆಂತರಿಕ ಗುಣಮಟ್ಟಭರವಸೆ ಕೇೂಶದ ಸಂಯೇೂಕರು ವೇದಿಕೆಯಲ್ಲಿ ಉಪಸ್ಥಿತಿರಿದ್ದರು.ಸಮಾಜ ಶಾಸ್ತ್ರ ವಿಭಾಗದ ಮುಖಸ್ಥರಾದ ಚಿಕ್ಕ ಹನುಮಯ್ಯ ಸ್ವಾಗತಿಸಿದರು.ಶ್ರುತಿ ಆಚಾರ್ಯ ಸಹಾಯಕ ಪ್ರಾಧ್ಯಾಪಕಿ ವಾಣಿಜ್ಯ ಶಾಸ್ತ್ರ ವಂದಿಸಿದರು.ವೀರಣ್ಣ ಎಸ್.ಸಹಾಯಕ ಪ್ರಾಧ್ಯಾಪಕರು ಅಥ೯ ಶಾಸ್ತ್ರ ಕಾಯ೯ಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳು ಪೇೂಷಕರು ಉಪನ್ಯಾಸಕರು  ಮಾಹಿತಿ ಕಾಯಾ೯ಗಾರದಲ್ಲಿ ಭಾಗವಹಿಸಿದರು.
ವರದಿ:-UDUPI FIRST
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo