ಅಕ್ಟೋಬರ್ 1 ರಿಂದ ಚಲನಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಅದಲ್ಲದೆ ಕೆಲ ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಪಡಿಸಿದೆ. ಪಾಸಿಟಿವಿಟಿ ದರ ಶೇಕಡ 1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಚಲನಚಿತ್ರಮಂದಿರಗಳ ಎಲ್ಲಾ ಆಸನಗಳ ಭರ್ತಿಗೆ ಸರಕಾರ ಇದೀಗ ಹಸಿರು ನಿಶಾನೆ ತೋರಿದೆ. ಚಿತ್ರ ಮಂದಿರ ಪ್ರವೇಶಕ್ಕೆ ಪ್ರೇಕ್ಷಕರು ಕಡ್ಡಾಯವಾಗಿ 1 ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಸೂಚನೆ ನೀಡಿದೆ.
ಮಹಾಮಾರಿ ಕೊರೊನಾ ಕಾರಣದಿಂದ ರಾಜ್ಯದಲ್ಲಿ ಚಲನಚಿತ್ರ ಮಂದಿರಗಳು ಹಲವು ತಿಂಗಳುಗಳಿಂದ ಜನರಿಲ್ಲದೆ ಮುಚ್ಚಿದ್ದವು. ಅದಲ್ಲದೆ ಇತ್ತಿಚೆಗೆ ಕೆಲ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚಿ ಹೋಗಿವೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ಮಂದಿರಗಳ ಸೀಟು ಭರ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಚಲನಚಿತ್ರ ಮಂದಿರಗಳ ಮಾಲೀಕರು ರಾಜ್ಯ ಸರಕಾರದ ಮೇಲೆ ಸತತವಾಗಿ ಒತ್ತಡ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ